ಗುಂಡು ಹೊಡೆದು ಪತ್ನಿಯ ಹತ್ಯೆಗೈದು, ತಾನೂ ಆತ್ಮಹತ್ಯೆಗೆ ಯತ್ನಿಸಿದ…!



(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 16. ಪತ್ನಿಗೆ ಗುಂಡು ಹೊಡೆದು ಹತ್ಯೆ ಮಾಡಿರುವ ಪತಿಯು ತಾನೂ ಗುಂಡು ಹೊಡೆದುಕೊಂಡ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ.





 

ಆರೋಪಿಯನ್ನು ಕೊಡಗಿನ ಸೋಮವಾರಪೇಟೆ ಮೂಲದ ಕಾಳಪ್ಪ, ಮೃತ ಪತ್ನಿಯನ್ನು ಸುಮಿತ್ರಾ ಎಂದು ಗುರುತಿಸಲಾಗಿದೆ. ಹಣ ತುಂಬಿಸುವ ಎಟಿಎಂ ವಾಹನದ ಸೆಕ್ಯುರಿಟಿ ಗಾರ್ಡ್ಆಗಿದ್ದ ಈತ ಸಿಂಗಲ್ಬ್ಯಾರಲ್ ಬಂದೂಕು ಹೊಂದಿದ್ದು, ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ ಈತ ಕೆಲಸಕ್ಕೆ ಹೋಗುವಾಗ ಪತ್ನಿಯನ್ನು ಮನೆಯಲ್ಲಿಟ್ಟು ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದ ವಿಚಾರವಾಗಿ ದಂಪತಿಯ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ. ಸಾವಿತ್ರಿ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.






error: Content is protected !!
Scroll to Top