ಮಂಗಳೂರು: ಉದ್ಯಮಿಯ ಮೇಲೆ ತಲವಾರು ದಾಳಿ



(ನ್ಯೂಸ್ ಕಡಬ) newskadaba.com ಮಂಗಳೂರು . 16: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಬಳಿ‌ ರವಿವಾರ ರಾತ್ರಿ‌ ಉದ್ಯಮಿಯೊಬ್ಬರ ಮೇಲೆ ತಲವಾರು ದಾಳಿ ನಡೆದಿದೆ. ಕಂದಾವರ ಕೈಕಂಬದ ಅಬ್ದುಲ್ ಅಝೀಝ್ (56)ದಾಳಿಗೊಳಗಾದ ಉದ್ಯಮಿ.





ಅವರು ರಾತ್ರಿ ಸುಮಾರು 10:30ಕ್ಕೆ ಮಸೀದಿಯಲ್ಲಿ ನಮಾಝ್ ಮಾಡಿ ಮನೆಗೆ ಮರಳಲು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿದ್ದಾಗ ಇಬ್ಬರು ಯುವಕರು ತಲವಾರಿನಿಂದ ಅಝೀಝ್ ಅವರ ತಲೆ, ಕೈ, ಕಾಲಿಗೆ ಕಡಿದು, ಗಂಭೀರ ಗಾಯಗೊಳಿಸಿ, ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಗಾಯಗೊಂಡ ಅಝೀಝ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿರುವ ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






error: Content is protected !!
Scroll to Top