ಸುಳ್ಯ: ಎಸ್.ವೈ.ಎಸ್ ಮತ್ತು ಎಸ್ಕೆಎಸ್ಸೆಸ್ಸೆಫ್ ಸುಳ್ಯ ನಗರ ಸಮಿತಿ ವತಿಯಿಂದ ಸ್ನೇಹ ಸಮ್ಮಿಲನ ಮತ್ತು ಮೌಲಿದ್ ಮಜ್ಲಿಸ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 14. ಪುಣ್ಯ ಪ್ರವಾದಿ (ಸ.ಅ) ಜೀವನ ಸಮಗ್ರ, ಸಂಪೂರ್ಣ ಶೀರ್ಷಿಕೆಯಲ್ಲಿ ನಡೆಯುವ ಮೀಲಾದ್ ಅಭಿಯಾನ ಅಂಗವಾಗಿ ಎಸ್.ವೈ.ಎಸ್ ಮತ್ತು ಎಸ್ಕೆಎಸ್ಸೆಸ್ಸೆಫ್ ಸುಳ್ಯ ನಗರ ಸಮಿತಿ ವತಿಯಿಂದ ಸ್ನೇಹ ಸಮ್ಮಿಲನ ಹಾಗೂ ಮೌಲಿದ್ ಮಜ್ಲಿಸ್ ಕಾರ್ಯಕ್ರಮವು ಸುಳ್ಯ ಆಲೆಟ್ಟಿ ರಸ್ತೆಯಲ್ಲಿರುವ ಸುಪ್ರೀಂ ಹಾಲ್ ನಲ್ಲಿ ಜರಗಿತು.

 

Xl

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವೈ.ಎಸ್ ಸುಳ್ಯ ಟೌನ್ ಅಧ್ಯಕ್ಷ ಹಾಜಿ ಎಸ್.ಎ ಹಮೀದ್ ವಹಿಸಿದರು. ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಉಸ್ತಾದ್ ತಾಜುದ್ದೀನ್ ರಹ್ಮಾನಿ ಬೆಳ್ಳಾರೆ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಎಸ್.ವೈ.ಎಸ್ ಜಿಲ್ಲಾ ಸಮಿತಿ ನಾಯಕರಾದ, ಎಸ್.ಕೆ.ಐ ಎಮ್.ವಿ.ಬಿ ಮುಫತ್ತಿಷರಾದ ಬಹು: ಉಸ್ತಾದ್ ಉಮ್ಮರ್ ದಾರಿಮಿ ಸಾಲ್ಮರ ವಿಷಯ ಮಂಡನೆ ನಡೆಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ವೈ.ಎಸ್ ಸುಳ್ಯ ವಲಯ ಪ್ರ.ಕಾರ್ಯದರ್ಶಿ ಶಾಫಿ ದಾರಿಮಿ ಮಾತನಾಡಿ ಶುಭಹಾರೈಸಿದರು.

Also Read  ವಿಶೇಷ ಘಟಕ ಯೋಜನೆಯಡಿ ಯಕ್ಷಗಾನ ತರಬೇತಿ ನೀಡಲು ಅರ್ಜಿ ಆಹ್ವಾನ


ಸಮಾರಂಭದಲ್ಲಿ ಎಸ್.ವೈ.ಎಸ್ ಸುಳ್ಯ ವಲಯಾಧ್ಯಕ್ಷರಾದ ಹಾಜಿ ಇಬ್ರಾಹಿಂ ಖತ್ತರ್ ಮಂಡೆಕೋಲು, ಸುಳ್ಯ ತಾಲ್ಲೂಕು ಮದ್ರಸಾ ಮೆನೇಜ್ ಮೆಂಟ್ ಅಧ್ಯಕ್ಷ ತಾಜ್ ಮುಹಮ್ಮದ್ ಸಂಪಾಜೆ, ಪ್ರ.ಕಾರ್ಯದರ್ಶಿ ಯು.ಪಿ ಬಶೀರ್ ಬೆಳ್ಳಾರೆ, ಸುಳ್ಯ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಹಸೈನಾರ್ ಧರ್ಮತಣ್ಣಿ, ಎಸ್.ವೈ.ಎಸ್ ಉಪಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಟೇಲ್, ಎಸ್ಕೆಎಸ್ಸೆಸ್ಸೆಫ್ ವಲಯ ಕೋಶಾಧಿಕಾರಿ ಅಬ್ದುಲ್ ರಝಾಕ್ ಮುಸ್ಲಿಯಾರ್, ಹಾಜಿ ಅಹ್ಮದ್ ಸುಪ್ರೀಂ, ಹಾಜಿ ಅಹ್ಮದ್ ಪಾರೆ, ಹಾಜಿ ಮುಹಮ್ಮದ್ ಸಿ.ಹೆಚ್, ಹಾಜಿ ಮುಹಮ್ಮದ್ ಪ್ಲಾಸ್ಟೋ, ಹಾಜಿ ಅಬ್ದುಲ್ ಖಾದರ್ ಆಜಾದ್, ನಝೀರ್ ಸುಪ್ರೀಂ, ನಿಝಾರ್ ಮೇನಾಲ, ಶಹೀದ್ ಪಾರೆ, ಇಸ್ಹಾಕ್ ಕಳಂಜ, ಆಶಿಕ್ ಅರಂತೋಡು, ಕಬೀರ್ ಅಜ್ಜಾವರ ತ್ವಲಬಾ, ಕರೀಂ ಕುಂಬರ್ಚೋಡ್ ಮತ್ತಿತರು ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ ಸಮಿತಿ ಕಾರ್ಯದರ್ಶಿ
ಅಕ್ಬರ್ ಕರಾವಳಿ ಸ್ವಾಗತಿಸಿ, ಎಸ್.ವೈ.ಎಸ್ ನಗರ ಸಮಿತಿ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ ವಂದಿಸಿ ಅಬ್ದುಲ್ ಮಜೀದ್ ಕೆ.ಬಿ ಮತ್ತು ಆಶಿಕ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು.

Also Read  ಪುತ್ತೂರು: ಬಿಜೆಪಿ ನಾಯಕರ ಫೋಟೋಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ➤ ಚಪ್ಪಲಿ ಹಾರ ಹಾಕಿ ಬ್ಯಾನರ್ ಅಳವಡಿಕೆ

error: Content is protected !!
Scroll to Top