ಮೈಸೂರು: ಪೊಲೀಸ್ ಜೀಪ್ ಮರಕ್ಕೆ ಢಿಕ್ಕಿ ➤ ಎ.ಎಸ್‍ಐ ಹಾಗೂ ಪೊಲೀಸ್ ಸ್ಥಳದಲ್ಲೇ ಮೃತ್ಯು



(ನ್ಯೂಸ್ ಕಡಬ) newskadaba.com ಮೈಸೂರು.12: ಕೆ.ಆರ್ ನಗರ ತಾಲೂಕಿನ ಸಿದ್ದಮಕೊಪ್ಪಲು ಗೇಟ್ ಬಳಿ ಪೊಲೀಸ್ ಜೀಪ್ ವೊಂದು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಪರಿಣಾಮ, ಕರ್ತವ್ಯ ನಿರತ ಪೊಲೀಸರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.







 

ಮೃತಪಟ್ಟಿರುವ ವ್ಯಕ್ತಿಯನ್ನು ಎಎಸ್‍ಐ ಮೂರ್ತಿ(45) ಹಾಗೂ ಮುಖ್ಯಪೇದೆ ಶಾಂತಕುಮಾರ್(40) ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಸಾಲಿಗ್ರಾಮದಿಂದ ಕೆ.ಆರ್. ನಗರದ ಕಡೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.






 

error: Content is protected !!
Scroll to Top