ಮೈಸೂರು:ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳು



(ನ್ಯೂಸ್ ಕಡಬ) newskadaba.com ಮೈಸೂರು, . 06: ಸ್ವಾತಂತ್ರ್ಯ ಉದ್ಯಾನವನದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪ ಮಾಡಿರುವ ಘಟನೆ ಇಂದು ನಡೆದಿದೆ.







 

 

ಗಾಂಧಿ ಪ್ರತಿಮೆಯಲ್ಲಿದ್ದ ಕಂಚಿನ ಊರುಗೋಲನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿದ್ದು, ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಸುಬ್ಬರಾಯನ ಕೆರೆಯ ಮಧ್ಯ ಭಾಗದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರ ದಂಡಿಯಾತ್ರೆಯ ಸ್ಮಾರಕವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದು, ಗಾಂಧೀಜಿ ಪ್ರತಿಮೆಯ ಕೈಯಲ್ಲಿ‌ ಹಿಡಿದಿರುವ ಕೋಲು, ಕನ್ನಡಕ ಮತ್ತು ಎಡಗೈಯನ್ನು ಹಾನಿ ಮಾಡಿದ್ದಾರೆ. ಸೂಕ್ತವಾದ ಭದ್ರತೆಯಿಲ್ಲದೆ ಈ ರೀತಿಯಾದ ಘಟನೆ ನಡೆದಿದೆ. ಇಲ್ಲಿಗೆ ಮಾದಕ ವ್ಯಸನಿಗಳು ಬಂದು ಈ ರೀತಿಯ ಕೃತ್ಯ ವೆಸಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.






 

 

error: Content is protected !!
Scroll to Top