ಪುತ್ತೂರು: ಕೆರೆಗೆ ಬಿದ್ದು ಯುವತಿ ಮೃತ್ಯು



(ನ್ಯೂಸ್ ಕಡಬ) newskadaba.com ಪುತ್ತೂರು, ಅ. 28. ಮಹಿಳೆಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ಕೊಲ್ಯ ಎಂಬಲ್ಲಿ ನಡೆದಿದೆ.





ಮೃತ ಮಹಿಳೆಯನ್ನು ಸುಳ್ಯ ತಾಲೂಕಿನ ಕಲ್ಲುಗುಂಡಿ‌ ನಿವಾಸಿ ಮಧುಶ್ರೀ ಎಂದು ಗುರುತಿಸಲಾಗಿದೆ. ಈಕೆ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ರಿಷೆಪ್ಷನ್ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಇವರು ಅವರು ಪ್ರತಿನಿತ್ಯ ಆಸ್ಪತ್ರೆಯ ಹಾಸ್ಟೇಲ್ ನಲ್ಲಿಯೇ ತಂಗುತ್ತಿದ್ದರು.






ಇವರು ಅ. 27ರ ಸಂಜೆ‌ ತನಕ ಆಸ್ಪತ್ರೆಯಲ್ಲಿ‌ ಕರ್ತವ್ಯ‌ ನಿರ್ವಹಿಸಿ ಇಂದು ವಾರದ ರಜೆಯ ಹಿನ್ನೆಲೆಯಲ್ಲಿ ಬೆಳಿಗ್ಗೆ ಹಾಸ್ಟೆಲ್ ನಲ್ಲಿ ಉಪಾಹಾರ‌ ಸೇವಿಸಿ ಸಂಪ್ಯದ ತನ್ನ‌ ಅಜ್ಜಿ ಮನೆಗೆ ತೆರಳಿದ್ದರು. ಮಧ್ಯಾಹ್ನ ತನಕ ಮನೆಯಲ್ಲಿಯೇ ಇದ್ದ ಇವರು ಮಧ್ಯಾಹ್ನದ ವೇಳೆಗೆ‌ ತೋಟಕ್ಕೆ ಹೋಗಿದ್ದು, ತುಂಬಾ ಸಮಯ ಕಳೆದರೂ ಮನೆಗೆ ಹಿಂತಿರುಗದ ಹಿನ್ನೆಲೆ ಹುಡುಕಾಡಿದಾಗ ಮನೆಯ ಸಮೀಪದ‌ ಕೆರೆಯಲ್ಲಿ ಅವರ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

error: Content is protected !!
Scroll to Top