ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಯಲಾಯ್ತು ಆರೋಪಿಗಳ ಸಂಚು!



(ನ್ಯೂಸ್‌ ಕಡಬ) newskadaba.com, ಜು.03 : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದ ಪ್ರಕರಣದ ವಿಚಾರಣೆ ವೇಳೆ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಸಾಕ್ಷಿ ನಾಶಪಡಿಸಲು ಮತ್ತು ಸಾಕ್ಷ್ಯ ನುಡಿಯದಂತೆ ತಡೆಯಲು ಆರೋಪಿಗಳು ಸಂಚು ರೂಪಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.







ತುಮಕೂರಿನ ಖಾಸಗಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಮುಖ ಸಾಕ್ಷಿ ಸಂದೀಪ್‌ನನ್ನು ಜೂನ್ 25ರಂದು ಆಕರ್ಷ್ ಎಂಬಾತ ಮಾತನಾಡಬೇಕೆಂದು ಕರೆದಿದ್ದನು. ಬಳಿಕ ಆತನನ್ನು ಕಾರಿನಲ್ಲಿ ಕೂರಿಸಿಕೊಂಡು ನಾಲ್ವರು ಆರೋಪಿಗಳು ಕೋರ್ಟ್‌ನಲ್ಲಿ ಏನೆಲ್ಲಾ ನಡೆದಿದೆ ಮತ್ತು ನೀನು ಪೊಲೀಸರಿಗೆ ಏನು ಹೇಳಿಕೆ ನೀಡಿದ್ದೀಯಾ ಎಂದು ತೀವ್ರ ವಿಚಾರಣೆ ನಡೆಸಿದ್ದಾರೆ.






ಕಾರಿನಲ್ಲಿದ್ದಾಗಲೇ ವಕೀಲರೊಬ್ಬರು ವಾಟ್ಸಪ್ ಕರೆ ಮೂಲಕ ಸಂದೀಪ್ ಜೊತೆ ಮಾತನಾಡಿದ್ದಾರೆ. “ಕೋಲಾರ ಅಥವಾ ಕೋರ್ಟ್‌ನಲ್ಲಿ ನಾವು ಹೇಳಿಕೊಟ್ಟಂತೆ ಹೇಳಬೇಕು. ಆರೋಪಿಗಳಾದ ಅನುಕುಮಾರ್, ಜಗದೀಶ್, ರಾಘವೇಂದ್ರ ಯಾರೆಂದೇ ಗೊತ್ತಿಲ್ಲ ಹಾಗೂ ಪೊಲೀಸರು ಹೇಳಿದ ಜಾಗದಲ್ಲಿ ಸಹಿ ಮಾಡಿದ್ದೇನೆ ಹೊರತು ನನಗೇನೂ ಗೊತ್ತಿಲ್ಲ” ಎಂದು ಸುಳ್ಳು ಸಾಕ್ಷಿ ನುಡಿಯುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾರೆ.

ಬಂಧಿತ ಮುಖ್ಯ ಆರೋಪಿ ಪುನೀತ್ ಪೊಲೀಸರ ಮುಂದೆ “ನನಗೇನೂ ಗೊತ್ತಿಲ್ಲ, ಯಾರೂ ಏನೂ ಹೇಳಿಕೊಟ್ಟಿಲ್ಲ” ಎಂದು ನಿರಾಕರಿಸುವ ಮೂಲಕ ಹೈಡ್ರಾಮಾ ಮಾಡಿದ್ದಾನೆ. ಈ ನಿಟ್ಟಿನಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ದಾಖಲೆಗಳನ್ನು ಕಲೆಹಾಕುತ್ತಿದ್ದು, ಪುನೀತ್ ಮೊಬೈಲ್ ಡೇಟಾ ರಿಟ್ರೀವ್ ಆದ ಬಳಿಕ ಸದರಿ ನಿರ್ಮಾಪಕರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

error: Content is protected !!
Scroll to Top