ಉಪ್ಪಿನಂಗಡಿ: ಅಡಿಕೆ ವ್ಯಾಪಾರಿಗೆ ಚೂರಿ ಇರಿದು 4 ಲಕ್ಷ ರೂ. ದರೋಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, . 28: ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದ ಅಡಿಕೆ ವ್ಯಾಪಾರಿಯೋರ್ವರ ಮೇಲೆ ಚೂರಿಯಿಂದ ತಿವಿದು 4 ಲಕ್ಷ ರೂ.ಗೂ ಅಧಿಕ ಹಣವನ್ನು ದರೋಡೆಗೈದ ಘಟನೆ ಮಂಗಳವಾರ ಪೆರ್ನೆ ಸಮೀಪದ ಪದೆಬರಿಯಲ್ಲಿ ನಡೆದಿದೆ.

ಪದೆಬರಿ ನಿವಾಸಿ ದೀಪಕ್‌ ಶೆಟ್ಟಿ (49) ಅವರು ಪೆರ್ನೆಯಲ್ಲಿ ಅಡಿಕೆ ವ್ಯಾಪಾರಿಯಾಗಿದ್ದು, ಮಂಗಳವಾರ ಅಡಿಕೆ ಮಾರಾಟದ ಹಣದೊಂದಿಗೆ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ದರೋಡೆ ನಡೆದಿದೆ. ಚೂರಿಯಿಂದ ತಿವಿಯಲ್ಪಟ್ಟ ದೀಪಕ್‌ ಶೆಟ್ಟಿ ತಲೆ, ಹೊಟ್ಟೆಗೆ ಏಟು ತಗಲಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.ನಾಲ್ವರು ದರೋಡೆಕೋರರಿಂದ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಅರಂತೋಡು: ಶಾಲಾ ಬಸ್ ಢಿಕ್ಕಿ ಹೊಡೆದು 6 ವರ್ಷದ ಬಾಲಕಿ ಮೃತ್ಯು ► ಬಸ್ಸಿನಿಂದ ಇಳಿದು ಟಿಫಿನ್ ಪಡೆಯುತ್ತಿದ್ದಾಗ ಘಟನೆ

 

 

 

error: Content is protected !!
Scroll to Top