ನೆಲಕ್ಕೆ ಬಡಿದು ಅಣ್ಣನಿಂದಲೇ ತಂಗಿಯ ಬರ್ಬರ ಹತ್ಯೆ.!

(ನ್ಯೂಸ್ ಕಡಬ) newskadaba.com  ರಾಜಸ್ಥಾನ . 25: ತಾನು ಪ್ರೀತಿ ಮಾಡಿದಾತನನ್ನು ಮದುವೆಯಾಗುತ್ತೇನೆ ಎಂದ ಸಹೋದರಿಯನ್ನು ಸಹೋದರನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಆರೋಪಿ ಸಹೋದರನನ್ನು ಪವನ್(24) ಎಂದು ಗುರುತಿಸಲಾಗಿದೆ. ಅಣ್ಣ-ತಂಗಿ ಇಬ್ಬರೂ ರಾಜಸ್ಥಾನದ ಅಲ್ವಾರ್ ಪಟ್ಟಣದ ಭಿವಾಡಿ ನಿವಾಸಿಗಳಾಗಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಆರೋಪಿ ಏರ್ ಕಂಡೀಷನರ್ ರಿಪೇರಿ ಮಾಡುವ ಅಂಗಡಿ ಹೊಂದಿದ್ದನು. ಯುವತಿಯ ಪ್ರಿಯತಮ ವಿಷ್ಣು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಪವನ್ ತನ್ನ ತಂಗಿಯ ತಲೆಯನ್ನು ಹಿಡಿದು ಹಲವು ಬಾರಿ ನೆಲಕ್ಕೆ ಬಡಿದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.ಅಣ್ಣನೇ ಇವರಿಬ್ಬರನ್ನು ಒಂದು ಮಾಡಲು ಒಪ್ಪದೆ ಈ ಕೃತ್ಯ ಎಸಗಿದ್ದಾನೆ.

Also Read  ವಿಟ್ಲ: ಕಂಬಳಬೆಟ್ಟು ಬಳಿ ಯುವಕನಿಗೆ ಹಲ್ಲೆ- ದೂರು ದಾಖಲು

 

 

error: Content is protected !!
Scroll to Top