ನಟ ಸುರೇಂದ್ರ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ . 25: ಬಂಟ್ವಾಳದಲ್ಲಿ ಹತ್ಯೆಯಾದ ತುಳು ಸಿನಿಮಾ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆಯ ಪ್ರಧಾನ ಆರೋಪಿಗಳಾಗಿ ಕಂಡುಬಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಆರೋಪಿಗಳನ್ನು ಮುಡಿಪು ಎಂಬಲ್ಲಿ ಪೊಲೀಸರು ಬಂಧಿಸಿದ್ದು, ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಹಾಗೂ ಕಿನ್ನಿಗೋಳಿ ನಿವಾಸಿ ಗಿರೀಶ್ ಬಂಧಿತ ಆರೋಪಿಗಳು. ಇವರು ಶನಿವಾರ ರಾತ್ರಿ ಕೇರಳ ಭಾಗದಿಂದ ಬಂಟ್ವಾಳ ಕಡೆಗೆ ಬರುತ್ತಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಡಿವೈಎಸ್ಪಿ ವೆಲೆಂಟೆನ್ ಡಿಸೋಜ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.ಅಕ್ಟೋಬರ್ 20 ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಿಸಿ ರೋಡ್ ಫ್ಲ್ಯಾಟ್ ನಲ್ಲಿ ಹತ್ಯೆ ಮಾಡಲಾಗಿತ್ತು.

 

 

Scroll to Top