ಬೆಳ್ತಂಗಡಿ : ಯಾತ್ರಿಕರ ಕಾರಿನಿಂದ ಬೆಲೆಬಾಳುವ ವಸ್ತುಳನ್ನ ಎಗರಿಸಿದ ಕಳ್ಳರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 22: ಬೆಂಗಳೂರಿನಿಂದ -ಬೆಳ್ತಂಗಡಿ ಗೆ ಬಂದಿದ್ದ ಯಾತ್ರಿಕರೊಬ್ಬರ ಕಾರಿನಿಂದ ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕಳ್ಳರು ಕಳವು ಗೈದಿದ್ದಾರೆ.

 

ಬೆಳ್ತಂಗಡಿಯ ಸುರ್ಯ ದೇವಾಸ್ಥನಕ್ಕೆ ಬೆಂಗಳೂರಿನಿಂದ ಬಂದ ಭಕ್ತರೊಬ್ಬರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನಿಂದ ರೂ. 20,000 ಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಖದೀಮರು ಕಳವು ಮಾಡಿದ್ದಾರೆ. ಓಮ್ನಿ ಕಾರಿನಲ್ಲಿ ಬಂದ ಇಬ್ಬರು ದುಷ್ರ್ಕಮಿಗಳು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಅಸ್ಪಷ್ಟವಾಗಿ ಸೆರೆಯಾಗಿದೆ. ಈಗಾಗಲೇ ಇಂತಹ ಹಲವಾರು ಪ್ರಕರಣಗಳು ಇಲ್ಲಿ ನಡೆದಿದೆ. ಆದರೆ ಇದಕ್ಕೆ ಸಂಭಂದ ಪಟ್ಟಂತೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸುರ್ಯ ದೇವಸ್ಥಾನಕ್ಕೆ ಬರುವ ಭಕ್ತರು, ಎಚ್ಚರ ವಹಿಸುವುದು ತೀರಾ ಅಗತ್ಯವಾಗಿದೆ.

Also Read  ತಲಕಾವೇರಿಯಲ್ಲಿ ತೀರ್ಥೋದ್ಭವ ➤ ತೀರ್ಥ ರೂಪದಲ್ಲಿ ದರ್ಶನ ನೀಡಿದ ಕಾವೇರಿ ತಾಯಿ

 

error: Content is protected !!
Scroll to Top