ಯುವತಿಗೆ ವಂಚನೆ ಪ್ರಕರಣ ➤ ಬೇರೆ ಯುವತಿಯೊಂದಿಗೆ ವಿವಾಹವಾದ ಯುವಕನ ಬಂಧನ



(ನ್ಯೂಸ್ ಕಡಬ) newskadaba.com ವಿಟ್ಲ ಅ. 13: ಯುವಕನೊಬ್ಬ ಪ್ರೀತಿಸಿ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಪಡೆದು, ಬೇರೆ ಯುವತಿ ಜೊತೆ ವಿವಾಹವಾಗುತ್ತಿರುವುದರಿಂದ ವಂಚನೆಗೊಳಗಾದ ಯುವತಿ ಆತನ ಮದುವೆಯ ದಿನವೇ ಯುವಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.





 

ಪಾಣೆ ಮಂಗಳೂರು ಆಲಡ್ಕ ನಿವಾಸಿ ನಾಸೀರ್‌ (30) ಆರೋಪಿಯಾಗಿದ್ದಾನೆ. ಈತ ಮಾಣಿ ಸಮೀಪದ ಯುವತಿಯನ್ನು ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದು, ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದನು. ಬಳಿಕ ಯುವತಿಗೆ ಬೆದರಿಕೆಯನ್ನೊಡ್ಡಿದ್ದನು ಆರೋಪಿಸಲಾಗಿದೆ.ಇದರ ನಡುವೆ ಈತ ಅ. 12ರಂದು ಪಾಣೆಮಂಗಳೂರಿನಲ್ಲಿ ಬೇರೆ ಹುಡುಗಿ ಜೊತೆ ಮದುವೆಯಾಗಿದ್ದನು. ಈ ವಿಚಾರ ತಿಳಿದು ವಂಚನೆಗೊಳಗಾದ ಯುವತಿ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.






 

error: Content is protected !!
Scroll to Top