ರೈಸಿಂಗ್ ಸ್ಟಾರ್ ವಿಜ್ಞಾನ ಮೇಳ ► ವಿಜ್ಞಾನ ಮಾದರಿಯಲ್ಲಿ ರೆಂಜಿಲಾಡಿಯ ಪ್ರಜ್ವಲ್ ಕೇಪುಂಜ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಸೆ.23. ಬೆಂಗಳೂರಿನ ಸಿಸ್ಕೋ ಸಂಭ್ರಮ ತಂಡದ ಪ್ರಾಯೋಜಕತ್ವದಲ್ಲಿ ಆಗಸ್ತ್ಯ ಫೌಂಡೇಶನ್ನ ಸಹಕಾರದೊಂದಿಗೆ ಇತ್ತೀಚೆಗೆ ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ರೈಸಿಂಗ್ ಸ್ಟಾರ್ ವಿಜ್ಞಾನ ಮೇಳದಲ್ಲಿ ಸೋಲಾರ್ ಗ್ರಾಸ್ ಕಟ್ಟರ್, ವೀಡ್ ಕಿಲ್ಲರ್ ವಿಜ್ಞಾನ ಮಾದರಿಯಲ್ಲಿ ರಾಮಕುಂಜೇಶ್ವರ ಪದವಿ ಪುರ್ವ ಕಾಲೇಜಿನ ಪ್ರಥಮ ಪಿಸಿಎಂಸಿ ವಿಭಾಗದ ಪ್ರಜ್ವಲ್ ಕೇಪುಂಜರವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಇವರು ರೆಂಜಿಲಾಡಿ ಗ್ರಾಮದ ಕೇಪುಂಜ ಪದ್ಮನಾಭ ಮತ್ತು ನೂಜಿಬಾಳ್ತಿಲ ಗ್ರಾ.ಪಂ.ಸದಸ್ಯೆ ರಜಿತಾ ಪದ್ಮನಾಭರವರ ಪುತ್ರ. ಇವರಿಗೆ ಕಾಲೇಜಿನ ವಿದ್ಯಾರ್ಥಿ ನಿರಂಜನ್ ಎನ್. ಸಹಕರಿಸಿರುತ್ತಾರೆ.

error: Content is protected !!
Scroll to Top