ಪೋಷಕರಿಗೆ ದೂರು ನೀಡಿದ್ದಕ್ಕೆ ಶಿಕ್ಷಕಿಯ ಭೀಕರ ಕೊಲೆ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳು

 heaತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿ ರೂಪಾ ರೆಡ್ಡಿ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ದುಬಾರಿ ಐಫೋನ್ ಹಾಗೂ ಬೈಕ್ ಖರೀದಿಸುವ ಆಸೆಯಲ್ಲಿದ್ದ ವಿದ್ಯಾರ್ಥಿಗಳ ಬಳಿ ಅಕ್ರಮವಾಗಿ ಇಟ್ಟುಕೊಂಡಿದ್ದ ಹಣ ಮತ್ತು ಮೊಬೈಲ್ ಪತ್ತೆಯಾಗಿತ್ತು. ಇದನ್ನು ಪೋಷಕರಿಗೆ ತಿಳಿಸುವುದಾಗಿ ಶಿಕ್ಷಕಿ ಎಚ್ಚರಿಸಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿದ್ದಾರೆ.

ಒಂದು ವಾರದಿಂದ ಶಿಕ್ಷಕಿಯ ಮನೆಯ ಮೇಲೆ ಕಣ್ಗಾವಲಿಟ್ಟು, ಚಾಕು, ಮುಖವಾಡ ಹಾಗೂ ಕೈಗವಸುಗಳನ್ನು ಖರೀದಿಸಿ ಮನೆಯ ಹಿಂಬಾಗಿಲಿನಿಂದ ಒಳನುಗ್ಗಿ ಹತ್ಯೆ ನಡೆಸಿದ್ದಾರೆ.

Scroll to Top