ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಕೊರೊನಾ- ದೃಢ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 02. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

 

ಖುದ್ದಾಗಿ ಡೊನಾಲ್ಡ್ ಟ್ರಂಪ್ ಅವರೇ ಟ್ವಿಟ್ಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮಿಬ್ಬರಿಗೂ ಕೊರೊನಾ ಸೋಂಕು ತಗುಲಿದೆ, ಇಬ್ಬರೂ ಒಟ್ಟಾಗಿ ರೋಗವನ್ನು ಎದುರಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ ಸೋಂಕು ದೃಢಪಟ್ಟಿದೆ. ಅವರ ಆಪ್ತ ಸಹಾಯಕರಿಗೆ ಕೊರೊನಾ ಸೋಂಖು ತಗುಲಿದ್ದ ಕಾರಣ ಟ್ರಂಪ್ ಹಾಗೂ ಮೆನಾಲಿಯಾ ಟ್ರಂಪ್ ಕ್ವಾರಂಟೈನ್‌ಗೆ ಒಳಗಾಗುವುದಾಗಿ ತಿಳಿಸಿದ್ದರು. ಬಳಿಕ ಅವರನ್ನು ಪರೀಕ್ಷೆ ಮಾಡಲಾಗಿದ್ದು, ಇಬ್ಬರಿಗೂ ಪಾಸಿಟಿವ್ ಬಂದಿದೆ.

 

 

error: Content is protected !!

Join the Group

Join WhatsApp Group