ಕೋಟ: ಕಾರು ಢಿಕ್ಕಿ ► ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಸೆ.18. ಇಲ್ಲಿಗೆ ಸಮೀಪದ ಕೋಟ ಎಂಬಲ್ಲಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ಕೋಟ ಸಮೀಪದ ಮುರ್ಕಾಯಿ ಎಂಬಲ್ಲಿ ಬ್ಯಾರಿಕೇಡ್ ಸಮೀಪ ಎಪಿಎಂ ಬಸ್ ಕಂಡಕ್ಟರ್ ಗುಲ್ವಾಡಿ ನಿವಾಸಿ ಇಸ್ಮಾಯಿಲ್ ಸಾಹೇಬ್ ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಇಸ್ಮಾಯಿಲ್ ಸ್ಥಳದಲ್ಲೇ ಮೃತಪಟ್ಟರು. ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!

Join the Group

Join WhatsApp Group