(ನ್ಯೂಸ್ ಕಡಬ) newskadaba.com ಕಡಬ, ಸೆ. 03. ಕಡಬ ಮತ್ತು ಪುತ್ತೂರು ಉಭಯ ತಾಲೂಕಿನಲ್ಲಿ ಗುರುವಾರ 17 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ.
ಕಡಬ ತಾಲೂಕಿನ ದೋಳ್ಪಾಡಿ ನಿವಾಸಿ 30 ವರ್ಷದ ಮಹಿಳೆ, ಶಿರಾಡಿ ಸಿರಿಬಾಗಿಲು ನಿವಾಸಿಗಳಾದ 60 ವರ್ಷದ ಮಹಿಳೆ ಹಾಗೂ 48 ವರ್ಷದ ಪುರುಷ, 70 ವರ್ಷದ ವೃದ್ದ, ಐತ್ತೂರು ಬೆತ್ತೋಡಿ ನಿವಾಸಿ 31 ವರ್ಷದ ವ್ಯಕ್ತಿ, ಕೊಯಿಲ ನಿವಾಸಿ 37 ವರ್ಷದ ಪುರುಷ, ಅಲಂಕಾರು ನಿವಾಸಿ 52 ವರ್ಷದ ಪುರುಷನಲ್ಲಿ ಕೊರೋನಾ ದೃಢಪಟ್ಟಿದೆ.