ಗುರುವಾರ ಎರಡನೇ ಬಾರಿಗೆ ಸಿಸಿಬಿ ಭೇಟಿಯಾದ ಇಂದ್ರಜಿತ್

(ನ್ಯೂಸ್ ಕಡಬ) newskadaba.com  ಬೆಂಗಳೂರು, ಸೆ. 03. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಕಾರ್ಯಾಚರಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ದೇಶಕ ಲಂಕೇಶ್ ಅವರು ಸಿಸಿಬಿ ಅಧಿಕಾರಿಗಳ ಮುಂದೆ ಗುರುವಾರ ಎರಡನೇ ಬಾರಿಗೆ ಹಾಜರಾಗಿರುವುದು ಕುತೂಹಲ ಮೂಡಿಸಿದೆ.

ಗುರುವಾರ ಭೇಟಿ ನೀಡಿದ ಇವರು 30 ನಿಮಿಷಗಳ ವಿಚಾರಣೆಯ ನಂತರ ಹೊರಬಂದರು. ಬಳಿಕ ಮಾತನಾಡಿದ ಇವರು ನಾನು ಈ ಪ್ರಕರಣದ ಮಾಹಿತಿದಾರ ಅಲ್ಲ, ಪಾರಿವಾಳದ ರೀತಿಯಲ್ಲಿ ಸಂದೇಶ ರವಾನಿಸಿದ್ದೇನೆ, ಪ್ರಕರಣದಲ್ಲಿ ಭಾಗಿಯಾದವರ ಕುರಿತು ಮಾಹಿತಿ ನೀಡುವುದಿಲ್ಲ ಇದು ಪೊಲೀಸ್ ತನಿಖೆಗೆ ಅಡ್ಡಿ ಪಡಿಸಬಹುದು ಎಂದರು.

Scroll to Top