ಕೊರಿಯರ್ ಮೂಲಕ ಗಾಂಜಾ ಮಾರಾಟ ➤ ಆರೋಪಿ ಬಂಧನ



(ನ್ಯೂಸ್ ಕಡಬ) newskadaba.com ಬೆಂಗಳೂರು, . 29: ನಗರದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸರಬರಾಜು ಜೋರಾಗಿಯೇ ನಡೆಯುತ್ತಿದೆ. ಇದೀಗ ಕೊರಿಯರ್ ಮೂಲಕ ಗಾಂಜಾ ಹಂಚುತ್ತಿದ್ದ ಅರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.





ಶಿವಾಜಿನಗರದ ಧೀರಜ್ ಕಪೂರ್ ಎಂಬಾತ ಆರೋಪಿ. ಈತ ಖಾಸಗಿ ಶಾಲೆಯಲ್ಲಿ ಓದುತ್ತಿರುವ 14 ವರ್ಷದ ಹುಡುಗನ ವಿಳಾಸಕ್ಕೆ ಪಾರ್ಸೆಲ್ ಮೂಲಕ ಗಾಂಜಾ ಕಳುಹಿಸಿದ್ದ. ಈ ಸಂಬಂಧ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆ ಮಾಹಿತಿಯನ್ವಯ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.






 

 

error: Content is protected !!
Scroll to Top