ಅಡುಗೆ ಮಾಹಿತಿ ► ಅವಲಕ್ಕಿ ಪಾಯಸ ಮಾಡುವ ವಿಧಾ‌ನ

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ,‌ ಸೆ.18. ನಾಲಿಗೆಗೆ ತುಂಬಾ ರುಚಿ ನೀಡುವ ಅವಲಕ್ಕಿಯಿಂದ ಪಾಯಸ ಮಾಡಿದ್ರೆ ಹೇಗೆ ಎಂದು ಗೊತ್ತಿದೆಯೇ….? ಅವಲಕ್ಕಿ ಪಾಯಸ ಮಾಡೋ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

ಅವಲಕ್ಕಿ- 1/2 ಕಪ್
ಸಬ್ಬಕ್ಕಿ- 1/4 ಕಪ್
ಬೆಲ್ಲ- 1/2 ಕಪ್
ಹಾಲು- 1/2 ಕಪ್
ನೀರು- 1 ಅಥವಾ 1/2 ಕಪ್
ತುಪ್ಪ- 1 ಚಮಚ
ಏಲಕ್ಕಿ ಪುಡಿ- ಸ್ವಲ್ಪ
ಗೋಡಂಬಿ- 5

ಮಾಡುವ ವಿಧಾನ:

  • ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಿಳಿಯಾಗುವವರೆಗೆ ಬಿಡಿ. ನಂತ್ರ ಬೆಲ್ಲದ ನೀರನ್ನು ಇನ್ನೊಂದು ಪಾತ್ರೆಗೆ ಸೋಸಿಕೊಳ್ಳಿ.
  • ಮತ್ತೊಂದು ಪಾತ್ರೆಯಲ್ಲಿ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿಡಿ. ಬಳಿಕ ಅದಕ್ಕೆ ನೀರು ಬೆರೆಸಿ ಸ್ಟೌವ್ ಮೇಲಿಟ್ಟು ಮೃದು ಹಾಗೂ ಪಾರದರ್ಶಕವಾಗುವವರೆಗೆ ಬೇಯಲು ಬಿಡಿ.
  • ಇನ್ನೊಂದು ಪಾತ್ರೆಯಲ್ಲಿ ಅವಲಕ್ಕಿ ಹಾಕಿ 10 ನಿಮಿಷ ನೆನೆಯಲು ಬಿಡಿ. ಅವಲಕ್ಕಿ ಮೃದುವಾದ ಬಳಿಕ ತೊಳೆದಿಡಿ.
  • ಸ್ಟವ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ನೆನೆದ ಅವಲಕ್ಕಿ ಹಾಕಿ, 1/2 ಚಮಚ ತುಪ್ಪ ಹಾಕಿ 2 ನಿಮಿಷ ಹುರಿಯಿರಿ. ನಂತ್ರ ಬೆಲ್ಲದ ಪಾಕವನ್ನ ಬೆರೆಸಿ. (ಒಂದು ವೇಳೆ ನೀವು ಬಳಸುವ ಬೆಲ್ಲದ ಪಾಕ ನೀರಿನಷ್ಟು ತೆಳುವಾಗಿದ್ದರೆ ಅದನ್ನು ಇನ್ನೊಂದು ಪ್ಯಾನ್ ಗೆ ಹಾಕಿ ಸ್ವಲ್ಪ ಕುದಿಸಿ ಬಳಿಕ ಬೆರೆಸಿ). ಪಾಕ ದಪ್ಪವಾಗಿದ್ದರೆ ನೇರವಾಗಿ ಬಳಸಿ.
  • ನಂತ್ರ ಬೆಂದ ಸಬ್ಬಕ್ಕಿಯನ್ನು ಬೆಲ್ಲದ ಪಾಕ ಮತ್ತು ಅವಲಕ್ಕಿ ಜೊತೆ ಬೆರೆಸಿ ಕೆಲ ನಿಮಿಷ ಬೇಯಿಸಿ. ಸಬ್ಬಕ್ಕಿ, ಬೆಲ್ಲದ ಪಾಕ ಹಾಗೂ ಅವಲಕ್ಕಿ ಚೆನ್ನಾಗಿ ಬೆಂದು ಗಟ್ಟಿಯಾದ ಬಳಿಕ ಸ್ಟೌವ್ ಆಫ್ ಮಾಡಿ ತಣ್ಣಗಾಗಲು ಬಿಡಿ.
  • ಸಣ್ಣ ಪ್ಯಾನ್ ನಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿಯನ್ನು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಇನ್ನೊಂದು ಪಾತ್ರೆಯಲ್ಲಿ ಹಾಲು ಹಾಕಿ ಅದನ್ನು 10 ನಿಮಿಷ ಕುದಿಸಿ ನಂತ್ರ ತಣ್ಣಗಾಗಲು ಬಿಡಿ.
Also Read  ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಮತ್ತು ಜೀವನದಲ್ಲಿ ನೆಮ್ಮದಿ ಸಿಗಬೇಕು ಅಂದರೆ ತಪ್ಪದೇ ಈ ನಿಯಮ ಪಾಲಿಸಿ

ಅವಲಕ್ಕಿ ಹಾಗೂ ಸಬ್ಬಕ್ಕಿಯನ್ನು ಬೇಯಿಸಿದ ಪಾತ್ರೆಗೆ ಹಾಲು, ಗೋಡಂಬಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಅವಲಕ್ಕಿ ಪಾಯಸ ಸವಿಯಲು ಸಿದ್ಧ.

error: Content is protected !!
Scroll to Top