ರಾಮಕುಂಜದಲ್ಲಿ ಬೆಳೆ ಸಮೀಕ್ಷೆಯ ಕುರಿತು ಮಾಹಿತಿ ಕಾರ್ಯಗಾರ

(ನ್ಯೂಸ್‌ಕಡಬ) newskadaba.com ಆಲಂಕಾರು , ಆ 18: ರಾಮಕುಂಜ ಮತ್ತು ಕೊಯಿಲ ಗ್ರಾಮದ ರೈತರಿಗೆ ಆಲಂಕಾರು ಪ್ರಾ.ಕೃ.ಪ.ಸ. ಸಂಘದ ಕೊಯಿಲ ಶಾಖೆಯಲ್ಲಿ ಮಂಗಳವಾರ ಫೋನಿನ ತಂತ್ರಾಂಶದ ಮೂಲಕ ಜಿ.ಪಿ.ಎಸ್ ಛಾಯಚಿತ್ರದ ಸಹಿತ ಮಾಹಿತಿಯನ್ನು ದಾಖಲಿಸುವ ಪ್ರಕ್ರಿಯೆಯ ಕಾರ್ಯಗಾರ ನಡೆಯಿತು.

ಕಡಬ ತಾಲೂಕಿನ ಮಾಸ್ಟರ್ ಟ್ರೈನರ್ ರಮೇಶ್ ರವರು, ಮಾಹಿತಿಯನ್ನು ನೀಡಿ ಸೇರಿದ ಎಲ್ಲಾ ರೈತ ವರ್ಗದವರ ಮೊಬೈಲ್‍ಗೆ ಬೆಳೆ ಸಮೀಕ್ಷೆಯ ಆಪ್ ನು ಡೌನ್‍ಲೋಡ್ ಮಾಡಿಸಿ ಮಾಹಿತಿ ನೀಡಿದರು. ಮಾಹಿತಿ ಕಾರ್ಯಗಾರದ ಅಧ್ಯಕ್ಷತೆಯನ್ನು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸರಕಾರಿ ಸಂಘದ ಅಧ್ಯಕ್ಷ ಧವರ್iಪಾಲ ರಾವ್ ಕಜೆ ವಹಿಸಿದ್ದರು.ಹಾಗೆಯೇ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ತಾ.ಪಂ ಸದಸ್ಯರಾದ ಜಯಂತಿ ಆರ್ ಗೌಡ, ರಾಮಕುಂಜ ಗ್ರಾಮ ಪಂಚಾಯತ್ ಅಭಿವೃಧ್ದಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಸೇರಿದಂತೆ ರಾಮಕುಂಜ ಹಾಗೂ ಕೊಯಿಲ ಗ್ರಾಮದ ರೈತರು ಉಪಸ್ಥಿತರಿದ್ದರು. ಗ್ರಾಮಕರಣಿಕರಾದ ಶೇಷಾದ್ರಿ, ಗ್ರಾಮಸಹಾಯಕರಾದ ಜಯಂತ, ಲಿಂಗಪ್ಪ ಮಾಹಿತಿ ಕಾರ್ಯಗಾರದಲ್ಲಿ ಸಹಕರಿಸಿದರು.

Also Read  ಬಿಜೆಪಿ ನಾಯಕಿ ಮತ್ತು ಶಾಸಕಿ ಕೊರೋನಾಗೆ ಬಲಿ

 

error: Content is protected !!
Scroll to Top