ವೃದ್ದೆಯ ಕತ್ತು ಕೊಯ್ದು ಚಿನ್ನಾಭರಣ ಹಾಗೂ 45 ಲಕ್ಷ ರೂ. ಕಳವುಗೈದ ದುಷ್ಕರ್ಮಿಗಳು



(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 17, ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು 70 ವರ್ಷದ ವೃದ್ದೆಯೋರ್ವರಕತ್ತನ್ನು ಕೊಯ್ದು ಕೊಲೆ ಮಾಡಿ 45 ಲಕ್ಷ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾದ ಘಟನೆ ಇಲ್ಲಿನ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





 

ವೃದ್ದೆಯ ಪತಿಯು ವಿದ್ಯುತ್ ಬಿಲ್ ಪಾವತಿ ಮಾಡಲೆಂದು ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭ ಮನೆಯಲ್ಲಿ ವೃದ್ದೆಯೋರ್ವರೇ ಇರುವಾಗ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಪತಿಯು ಮನೆಗೆ ಬಂದ ವೇಳೆ ಟಿ.ವಿ ಆನ್ ಆಗಿದ್ದು, ಪತ್ನಿಯ ಮೃತದೇಹವು ರಕ್ತದ ಮಡುವಿನಲ್ಲಿ ಬಿದ್ದಿತ್ತು, ಇನ್ನು ಮಂಚದ ಕೆಳಗೆ ಇಟ್ಟಿದ್ದ ಕಬ್ಬಿಣದ ಟ್ರಂಕ್‌ಗಳನ್ನು ಹೊರಗೆ ತೆಗೆದು ಬಿಸಾಕಿದ್ದು, ಅದರಲ್ಲಿದ್ದ 45 ಲಕ್ಷ ರೂ. ನಗದನ್ನು ವೃದ್ದೆಯ ಕತ್ತು ಕೊಯ್ದ ಆರೋಪಿಗಳು ದೋಚಿದ್ದಾರಲ್ಲದೇ ಈ ಕೃತ್ಯದಲ್ಲಿ ಪರಿಚಯಸ್ಥರೇ ಭಾಗಿಯಾಗಿದ್ದಾರೆ ಎಂಬ ಅನುಮಾನ ಕೂಡಾ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.






error: Content is protected !!
Scroll to Top