ನಿಯಂತ್ರಣ ತಪ್ಪಿದ ನಾಡದೋಣಿ ➤ ನಾಲ್ವರು ಮೀನುಗಾರರು ನಾಪತ್ತೆ



(ನ್ಯೂಸ್ ಕಡಬ) newskadaba.com ಉಡುಪಿ, ಆ,16:  ಜಿಲ್ಲೆ ಕುಂದಾಪುರ ಕಿರಿಮಂಜೇಶ್ವರ ಬಳಿ ಕೊಡೇರಿ ಸಮುದ್ರದಲ್ಲಿ ಬಂಡೆಗೆ ನಾಡದೋಣಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.





 

ಭಾರೀ ಮಳೆ ಮತ್ತು ಅಲೆಗಳ ಏರಿಳಿತವಿದ್ದ ಕಾರಣ ನಿಯಂತ್ರಣ ತಪ್ಪಿದ ನಾಡದೋಣಿ ಬಂಡೆಗೆ ಡಿಕ್ಕಿ ಹೊಡೆದು ಛಿದ್ರವಾಗಿದೆ. 10 ಮೀನುಗಾರರ ಪೈಕಿ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಸಲಾಗಿದೆ. ಸಾಗರಶ್ರೀ ಎಂಬ ಹೆಸರಿನ ನಾಡದೋಣಿ ಹಾನಿಯಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಬೈಂದೂರು ಕ್ಷೇತ್ರದ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿಹಾಗೂ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿಯವರು ಭೇಟಿ ನೀಡಿದ್ದಾರೆ.






 

error: Content is protected !!
Scroll to Top