(ನ್ಯೂಸ್ ಕಡಬ) newskadaba.com ಕಡಬ, ಜೂ.04. ಭತ್ತದ ಗದ್ದೆಗೆ ಮಣ್ಣು ಹಾಕಿ ಸಮತಟ್ಟು ಮಾಡಿರುವುದರಿಂದ ಮಳೆ ನೀರು ಹರಿಯುತ್ತಿಲ್ಲ ಎಂದು ಆರೋಪಿಸಿ ಹಲವಾರು ಮಂದಿ ಮಣ್ಣು ಹಾಕಿದ ಜಾಗದಲ್ಲಿ ಚರಂಡಿ ತೊಡಲು ಪ್ರಾರಂಭಿಸಿದ್ದರಿಂದ ಮಾತಿನ ಚಕಮಕಿ ನಡೆದು ಪೋಲಿಸರು ಹಾಗೂ ಪಂಚಾಯಯಿತಿ ಅವರ ಮದ್ಯಪ್ರವೇಶಿಸಿದ ಘಟನೆ ಗುರುವಾರ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ.
ಕಡಬದಿಂದ ಕಳಾರದವರೆಗೆ ಹಿಂದೆ ಇದ್ದ ಗದ್ದೆಗಳ ಸಾಲು ಈಗ ಮಾಯವಾಗಿದೆ, ಯಾಕೆಂದರೆ ಭತ್ತದ ಗದ್ದೆಗಳನ್ನು ಮಾರಾಟ ಮಾಡಲಾಗಿದೆ, ಖರೀದಿಸಿದವರು ಗದ್ದೆಗಳಿಗೆ ಮಣ್ಣು ತುಂಬಿಸಿ ತಮ್ಮ ವಾಣಿಜ್ಯ ಉದ್ದೇಶಗಳಿಗೆ ಉಪಯೋಗಿಸಿಕೊಂಡಿದ್ದಾರೆ ಪರಿಣಾಮ ಮಧ್ಯದಲ್ಲಿರುವ ಕೆಲವು ಭತ್ತದ ಗದ್ದೆಗಳಿಗೆ ನೀರು ಸರಗವಾಗಿ ಹರಿಯದೆ ಇರುವುದರಿಂದ ತೊಂದರೆ ಉಂಟಾಗಿದೆ, ಇದರಿಂದ ಭತ್ತದ ಕೃಷಿ ಮಾಡುವವರಿಗೆ ತೊಂದರೆಯಾಗಿದೆ. ಹಿಂದೆ ಓರೋಡಿ ಎಂಬಲ್ಲಿಂದ ಬೈಲುಗಳ ಮೂಲಕ ಮಳೆ ನೀರು ಗದ್ದೆಗಳ ಮೂಲಕ ಮತ್ತು ತೋಡಿನ ಮುಲಕ ನೀರು ಪ್ರಾಕೃತಿಕವಾಗಿ ಹರಿಯುತ್ತಿತ್ತು, ಆದರೆ ಸಮಸ್ಯೆ ಉಂಟಾಗಿರುವುದು ಕಳೆದರೆಡು ವರ್ಷಗಳಿಂದ ಕೆಲವು ಜಮಿನ್ದಾರರು ತಮ್ಮ ಭತ್ತದ ಬೇಸಾಯದ ಗದ್ದೆಗಳನ್ನು ಮಾರಾಟ ಮಾಡಿದ್ದಾರೆ. ಉತ್ತಮ ದರ ನೀಡಿ ಪಡೆದುಕೊಂಡವರು ಸಹಜವಾಗಿಯೇ ಗದ್ದೆಗಳಿಗೆ ಮಣ್ಣು ತುಂಬಿ ವಾಣಿಜ್ಯ ಉದ್ದೇಶಗಳಿಗೆ ಉಪಯೋಗಿಸಿಕೊಂಡಿದ್ದಾರೆ, ಪರಿಣಾಮ ಮೇಲೆ ಇರುವ ಗದ್ದೆಗಳಲ್ಲಿ ನೀರು ತುಂಬಿ ಅವರಿಗೆ ಬೇಸಾಯ ಮಾಡಲು ಸಾದ್ಯವಾಗುತ್ತಿಲ್ಲ, ಅದಿಕೃತವಾಗಿ ಇದ್ದ ತೋಡುಗಳು ಹಾಗೆಯೇ ಇದ್ದರೂ ಅದರಲ್ಲಿ ಮಳೆಗಾಲದಲ್ಲಿ ಅದರಲ್ಲಿ ಹೆಚ್ಚು ನೀರು ಹರಿಯುತ್ತಿರುವುದರಿಂದ ಗದ್ದೆಗಳಿಂದ ನೀರು ಹೋಗುತ್ತಿಲ್ಲ ಇದು ಸಮಸ್ಯೆಯಾಗಿರುವುದು. ಈಗಾಗಲೇ ಸ್ಥಳೀಯವಾಗಿ ಪರಸ್ಪರ ಮಾತಿನ ಚಕಮಕಿ ನಡೆದು ಗಲಾಟೆಗೆ ಕಾರಣವಾಗುತ್ತಿದೆ.
ಪಂಚಾಯತ್ ಅಧ್ಯಕ್ಷ, ಪಿಡಿಒ, ಸದಸ್ಯರ ಭೇಟಿ
ಗುರುವಾರ ತಮ್ಮ ಗದ್ದೆಯಲ್ಲಿ ನೀರು ತುಂಬಿದೆ ಎಂದು ಆರೋಪಿಸಿ ಮಣ್ಣು ಹಾಕಿದ ಸಮತಟ್ಟು ಮಾಡಿದ ಜಾಗದಲ್ಲಿ ಚರಂಡಿ ತೋಡಲು ಪ್ರಾರಂಭಿಸಿದ್ದರು, ಇದನ್ನು ಜಾಗದ ಮಾಲಕರು ಆಕ್ಷೇಪಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಕೆಲಸವನ್ನು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಇತ್ತಂಡಗಳ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಬಳಿಕ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ, ಸದಸ್ಯ ಅಶ್ರಫ್ ಶೇಡಿಗುಂಡಿ ಆಗಮಿಸಿ ಹರಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಾವು ಅಕ್ಕಪಕ್ಕದ ಜಾಗದ ಮಾಲಕರು ಅವರು ಖರೀದಿಸಿದ ಗದ್ದೆಗೆ ಮಣ್ಣು ತುಂಬಿಸುತ್ತಿರುವ ಸಂದರ್ಭದಲ್ಲಿ ನಾವು ಆಕ್ಷೇಪ ವ್ಯಕ್ತಪಡಿಸುತ್ತಿದ್ದೆವೆ ಆ ಸಂದರ್ಭದಲ್ಲಿ ನೀರಿನ ಹರಿವಿಗೆ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಈಗ ನೀರು ಹರಿಯುವುದನ್ನು ಬ್ಲಾಕ್ ಮಾಡಿದ್ದಾರೆ, ಇದರಿಂದಾಗಿ ನಾನು ಕಳೆದ ಎಡು ವರ್ಷದಿಂದ ಭತ್ತದ ಕೃಷಿ ಮಾಡುತ್ತಿಲ್ಲ.
ಅಬ್ಬಾಸ್ , ಕೃಷಿಕ