ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com  ಮಂಗಳೂರು ಆ. 12, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಇ-ಪಂಚಾಯತ್ ಯೋಜನೆಯಡಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಆನ್‍ಲೈನ್ ಮೂಲಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.


ಹುದ್ದೆಯ ವಿವರ ಇಂತಿವೆ: ಹುದ್ದೆಯ ಹೆಸರು-ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರು (ಎ.ಡಿ.ಪಿ.ಎಮ್.) ಅರ್ಹತೆ -ಬಿ.ಇ. (ಸಿ.ಎಸ್/ಇ. ಮತ್ತು ಸಿ/ಐ.ಎಸ್)/ ಎಮ್.ಸಿ.ಎ/ಬಿ.ಸಿಎ, ಮಾಸಿಕ ವೇತನ ರೂ 25,000 (ಸೇವಾ ಶುಲ್ಕ+ ಸೇವಾ ತೆರಿಗೆ ಪ್ರತ್ಯೇಕ), ಖಾಲಿ ಹುದ್ದೆಗಳ ಸಂಖ್ಯೆ-1.
ದ.ಕ. ಜಿಲ್ಲಾ ಪಂಚಾಯತ್ ವೆಬ್‍ಸೈಟ್ zpdk.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group