ಕಾಂತಮಂಗಲದಲ್ಲಿ ಏಕಾಏಕಿ ಸ್ಮೋಕ್‌ ಹೌಸ್‌ನಲ್ಲಿ ಬೆಂಕಿ➤ 3ಲಕ್ಷಕೂ ಅಧಿಕ ನಷ್ಟ



(ನ್ಯೂಸ್ ಕಡಬ) newskadaba.com.ಸುಳ್ಯ,ಆ.13: ಅಜ್ಜಾವರ ಗ್ರಾಮದ ಕಾಂತಮಂಗಲದ ಸೂರ್ಯಾಜಿ ರಾವ್‌ ಅವರ ರಬ್ಬರ್‌ ಒಣಗಿಸುವ ಸ್ಮೋಕ್‌ ಹೌಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸ್ಮೋಕ್‌ ಹೌಸ್‌ ಭಾಗಶಃ ಸುಟ್ಟು ಕರಕಲಾದ ಘಟನೆ ನಿನ್ನೆ ರಾತ್ರಿ ನಡೆದಿದೆ.






ನಿನ್ನೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ಆವರಿಸಿಕೊಂಡು ಸ್ಮೋಕ್‌ ಹೌಸ್‌ ಉರಿಯಲಾರಂಭಿಸಿದೆ ಏಕಾಏಕಿ ಹೊತ್ತಿಕೊಂಡ ಬೆಂಕಿ ನಂದಿಸಲು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದರು. ತಕ್ಷಣವೇ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿಯಿಂದಾಗಿ ಸುಮಾರು 3ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.






error: Content is protected !!
Scroll to Top