ಆನ್ ಲೈನ್ ಕ್ಲಾಸ್ ಪಜೀತಿ, ನೆಟ್ ವರ್ಕ್ ಸಮಸ್ಯೆ ➤ ಬಸ್ ನಿಲ್ದಾಣದಲ್ಲಿ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಪಾಲೆತ್ತಡಿ, ಆ.11:  ಕೊರೊನಾ ಹಾವಳಿಯಿಂದ ಇನ್ನೂ ಸರಿಯಾಗಿ ಶಾಲೆಗಳು ತೆರೆದುಕೊಂಡಿಲ್ಲ. ಆದರೆ ಆನ್ ಲೈನ್ ಕ್ಲಾಸ್ ಗಳ ಪಜೀತಿಯಲ್ಲಿ ಮಕ್ಕಳು ಸಿಲುಕಿ ಒದ್ದಾಡುತ್ತಿದ್ದಾರೆ. ಮೊಬೈಲ್ ಹಿಡಿದುಕೊಂಡು ನೆಟ್ವರ್ಕ್‍ಗಾಗಿ ಕಾಡು ಮೇಡು ಸುತ್ತುವ ಪರಿಸ್ಥಿತಿ ಗೆ ಸಿಲುಕಿದ್ದಾರೆ. ದ. ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಾಲೆತ್ತಡಿ ಎಂ‌ಬಲ್ಲಿನ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿಯಾಗಿದೆ. ದಕ್ಷಿಣ ಕನ್ನಡ ವಿದ್ಯಾವಂತರ, ಅಭಿವೃದ್ಧಿ ಹೊಂದಿರುವ ಜಿಲ್ಲೆ ಎನ್ನುವ ಮಾತಿದೆ. ಆದರೆ ಇಲ್ಲಿನ ವಿದ್ಯಾವಂತರಾಗಲು ಪಡುವ ಪಾಡು ಯಾವ ಮಕ್ಕಳಿಗೂ ಬೇಡ.

 

ಹೌದು, ಬೆಟ್ಟ-ಗುಡ್ಡ, ಬಯಲು ಸೀಮೆ- ದಟ್ಟ ಕಾಡು ಹೀಗೆ ಪ್ರಕೃತಿಯ ಎಲ್ಲಾ ರೂಪಗಳನ್ನು ಮೈಗೂಡಿಸಿಕೊಂಡಿರುವ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ನೆಟ್​​ವರ್ಕ್​ನದ್ದೇ ಪ್ರಾಬ್ಲಮ್. ಮಂಗಳೂರು ಸೇರಿದಂತೆ ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್ ಲೈನ್ ಕ್ಲಾಸ್ ಆರಂಭಗೊಂಡಿದ್ದು, ಈ ಕ್ಲಾಸ್ ಗಳನ್ನು ಎಟೆಂಡ್ ಮಾಡೋದೇ‌ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ತಲೆನೋವಾಗಿದೆ.ಕುಗ್ರಾಮಗಳಲ್ಲಿ ಇರುವಂತಹ ಈ ವಿದ್ಯಾರ್ಥಿಗಳು ಮೊಬೈಲ್ ನೆಟ್​​ವರ್ಕ್​​ ಹುಡುಕಿಕೊಂಡು ಮನೆ ಬಿಟ್ಟು ಬೀದಿ ಸುತ್ತಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಾಲೆತ್ತಡಿ ಎಂ‌ಬಲ್ಲಿನ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿಯಾಗಿದೆ.ಬೆಳಿಗ್ಗೆ ಎದ್ದು ಆನ್ ಲೈನ್ ಕ್ಲಾಸ್ ಗೆ ಹಾಜರಾಗಲು ಇಲ್ಲಿನ ಹತ್ತಾರು ವಿದ್ಯಾರ್ಥಿಗಳು ಈ ಬಸ್ ನಿಲ್ದಾಣದ ಬಳಿ ಬರುತ್ತಾರೆ. ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ತರಗತಿ ಇರುವ ಕಾರಣ ಕುಳಿತುಕೊಳ್ಳಲು ಕುರ್ಚಿಗಳನ್ನೂ ಹೊತ್ತುಕೊಂಡು ಬರುತ್ತಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಇಲ್ಲದ ಕಾರಣ ಈ ವಿದ್ಯಾರ್ಥಿಗಳ ಕ್ಲಾಸ್ ಗಳಿಗೆ ಯಾವುದೇ ಅಡಚಣೆಯಾಗುತ್ತಿಲ್ಲ. ಮೊಬೈಲ್ ನೆಟ್​​​ವರ್ಕ್​​ಗಾಗಿ ಮನೆಯಿಂದ ಒಂದು, ಎರಡು ಕಿಲೋಮೀಟರ್ ಕಾಡಿನ ಹಾದಿಯಲ್ಲಿ ಬರುವ ಈ ವಿದ್ಯಾರ್ಥಿಗಳು ಮಧ್ಯಾಹ್ನದ ತನಕ ಬಸ್ ನಿಲ್ದಾಣದಲ್ಲೇ ನಿಂತು ಬಳಿಕ ತರಗತಿ ಮುಗಿದ ಬಳಿಕ ಮನೆಗೆ ಮರಳುತ್ತಾರೆ.ಇಂತಹ ಕಠಿಣ ಪರಿಸ್ಥಿಗಳಿಗೆ ಯಾವಾಗ ಮುಕ್ತಿ ಸಿಗುತ್ತದೆಯೋ ತಿಳಿದಿಲ್ಲ. ಇನ್ನಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡು ಕ್ರಮ ಕೈಗೊಳ್ಳಬೇಕಾಗಿದೆ.

Also Read  ಕಡಬದ MSIL ಮದ್ಯದಂಗಡಿ ಫುಲ್‌ ರಶ್

 

error: Content is protected !!
Scroll to Top