ಕಡಬ: ಪರವಾನಿಗೆ ಇಲ್ಲದೆ ನಕಲಿ ಪಿಸ್ತೂಲ್ ಹೊಂದಿದ್ದ ವ್ಯಕ್ತಿ ➤ ಎರಡು ಪಿಸ್ತೂಲ್, ರಂಜಕ, ಪೊಟ್ಯಾಸಿಯಂ ಸಹಿತ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಆ.05. ಯಾವುದೇ ಪರವಾನಗಿ ಇಲ್ಲದೆ ನಕಲಿ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಕಡಬ ಪೊಲೀಸರು, ಎರಡು ಪಿಸ್ತೂಲು ಹಾಗೂ 02 ಖಾಲಿ ತೋಟೆ ಹಾಗೂ ರಂಜಕ, ಪೊಟ್ಯಾಶಿಯಂನ್ನು ವಶಪಡಿಸಿಕೊಂಡಿದ್ದಾರೆ‌.

ಬಂಧಿತ ಆರೋಪಿಯನ್ನು ಕಡಬ ತಾಲೂಕು ಕಡಬ ಗ್ರಾಮದ ಪಾಲೋಳಿ ನಿವಾಸಿ ಜನಾರ್ಧನ್ ಗೌಡ ಎಂದು ಗುರುತಿಸಲಾಗಿದೆ. ಆರೋಪಿಯು ಯಾವುದೇ ಪರವಾನಿಗೆ ಇಲ್ಲದೆ ನಕಲಿ ಪಿಸ್ತೂಲ್ ಹೊಂದಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಆರೋಪಿಯ ಮನೆಯ ಮೇಲೆ ದಾಳಿ ಮಾಡಿ 02 ನಕಲಿ ಪಿಸ್ತೂಲ್ ಗಳನ್ನು ಮತ್ತು 02 ಖಾಲಿ ತೋಟೆ ಹಾಗೂ ರಂಜಕ, ಪೊಟ್ಯಾಶಿಯಂ ಕೇಪುಗಳನ್ನು ವಶಪಡಿಸಿಕೊಂಡಿದ್ದಾರೆ‌.

Also Read  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಹಲ್ಲೆ- ಆರೋಪ

ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ರವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಕ್ರಂ ಆಮ್ಟೆರವರ ಮಾರ್ಗದರ್ಶನದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ದಿನಕರ ಶೆಟ್ಟಿಯವರ ನಿರ್ದೇಶನದಂತೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆಯವರ ಸಲಹೆಯಲ್ಲಿ ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ರುಕ್ಮ ನಾಯ್ಕ್ ಹಾಗೂ ಎಎಸ್ಐ ಚಿದಾನಂದ ರೈ, ಹೆಡ್ ಕಾನ್ಸ್‌ಟೇಬಲ್ ಸ್ಕರಿಯ, ಪೊಲೀಸ್ ಕಾನ್ಸ್‌ಟೇಬಲ್ ಭವಿತ್ ರೈ, ಶ್ರೀಶೈಲ, ಮಹೇಶ್ ಹಾಗೂ ಜೀಪು ಚಾಲಕ ಕನಕರಾಜ್ ರವರು ಭಾಗವಹಿಸಿದ್ದರು.

error: Content is protected !!
Scroll to Top