ಸ್ಕೂಟರ್- ಕಾರು ಡಿಕ್ಕಿ ➤ಯುವಕ ಸ್ಥಳದಲ್ಲೇ ಮೃತ್ಯು



(ನ್ಯೂಸ್ ಕಡಬ) newskadaba.com.ಉಡುಪಿ,ಆ.1: ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಉಡುಪಿಯ ಬ್ರಹ್ಮಾವರ ಸಮೀಪದ ಕೆಜಿ ರೋಡ್ ಬಳಿ ನಡೆದಿದೆ.






ಮೃತ ಯುವಕನ್ನು ಗರಡಿ ಮಜಲ್ ನಿವಾಸಿ ಪ್ರವೀಣ್ (24) ಎಂದು ಗುರುತಿಸಲಾಗಿದೆ. ದ್ವಿಚಕ್ರ ಸವಾರ ಡಿವೈಡರ್ ಮೇಲಿನಿಂದ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವೇಳೆ ಮತ್ತೊಂದು ಬದಿಯಲ್ಲಿ ಬಂದ ಬೆಲೋನಾ ಕಾರು ಅಚಾನಕ್ ಆಗಿ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top