ವಿವಾಹಿತ ಮಹಿಳೆಯೊಂದಿಗೆ ಯುವಕನ ಚೆಲ್ಲಾಟ ➤ ಸಿಕ್ಕಿ ಬಿದ್ದ ಯುವಕನಿಗೆ ಸ್ಥಳೀಯರಿಂದ ಗೂಸಾ



(ನ್ಯೂಸ್ ಕಡಬ) newskadaba.com ಸುಳ್ಯ, ಜು.24:  ಸುಳ್ಯದ ಯುವಕನೋರ್ವ ಆಲೆಟ್ಟಿ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಚೆಲ್ಲಾಟವಾಡಲು ಹೋಗಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಘಟನೆ ಇಂದು ನಡೆದಿದೆ.





 

ಆಲೆಟ್ಟಿ ಗ್ರಾಮದ ಅರಂಬೂರು ಪರಿಸರದಲ್ಲಿ ವಾಸವಿದ್ದ ವಿವಾಹಿತ ಮಹಿಳೆಯೊಂದಿಗೆ ಚೆಲ್ಲಾಟವಾಡಲು ಮಹಿಳೆಯ ಮನೆಗೆ ಹೋಗಿ ಸ್ಥಳೀಯ ಯುವಕರ ಕೈಗೆ ಸಿಕ್ಕಿ ಬಿದ್ದು ಒದೆ ತಿಂದಿದ್ದಾನೆ. ಸುಳ್ಯದಲ್ಲಿ ಆಟೋ ಚಾಲಕನಾಗಿರುವ ಯುವಕ ಗಣೇಶ್ ಎಂಬಾತ ಮಹಿಳೆಯ ಮನೆಗೆ ಮಧ್ಯಾಹ್ನದ ಹೊತ್ತಿಗೆ ಯಾರು ಇಲ್ಲದ ಸಂದರ್ಭದಲ್ಲಿ ತೆರಳಿ ಮಹಿಳೆಯೊಂದಿಗೆ ಚೆಲ್ಲಾಟವಾಡುವುದನ್ನ ಗಮನಿಸಿದ ಸ್ಥಳೀಯ ನೆರೆಯ ಯುವಕರು ಸೇರಿ ಯುವಕನಿಗೆ ಗೂಸಾ ನೀಡಿದ್ದಾರೆ. ಹಾಗೂ ಇನ್ನೂ ಈ ಕಡೆಗೆ ಬರದಂತೆ ಎಚ್ಚರಿಕೆ ನೀಡಿ ಕಳುಹಿಸಿದರೆ0ದು ತಿಳಿದು ಬಂದಿದೆ.






 

 

error: Content is protected !!
Scroll to Top