ದೇಶದ ಅತೀ ದೊಡ್ಡ ಕೋವಿಡ್ ಕೇರ್​ ಸೆಂಟರ್​ ಸೋಮವಾರದಿಂದ ಆರಂಭ ➤ BBMP ಆಯುಕ್ತ ಮಂಜುನಾಥ್ ಪ್ರಸಾದ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.24: ದೇಶದ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್‌ ಸೋಮಾವಾರದಿಂದ ಪ್ರಾರಂಭವಾಗುವುದು ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರದಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ರೋಗಲಕ್ಷಣ ಇಲ್ಲದ ಕೋವಿಡ್ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದ್ದು, ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ಅಧಿಕಾರಿಗಳ ತಂಡ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಯುಕ್ತರು ಬಿಐಇಸಿ ಕೋವಿಡ್ ಕೇರ್ ಸೆಂಟರ್‌ನಲ್ಲಿ 5,000 ಆಸನಗಳ ಸಾಮರ್ಥ್ಯವುಳ್ಳ ಹಾಲ್‌ಗಳು ಈಗಾಗಲೆ ಸಿದ್ದವಾಗಿದ್ದು ಸಾಮಾಗ್ರಿಗಳ ಬಾಡಿಗೆ ಹಾಗೂ ಖರೀದಿ ವಿಚಾರದಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ಗೊಂದಲಗಳಿದ್ದವು. 28 ಸಾಮಾಗ್ರಿಗಳಿಗೆ ಒಂದು ಸೆಟ್‌ಗೆ ಒಂದು ದಿನಕ್ಕೆ 800 ರೂಪಾಯಿ ನಿಗದಿ ಮಾಡಲಾಗಿದೆ ಎಂದರು. 5,000 ಬೆಡ್‌ಗಳಿಗೆ ಒಂದು ತಿಂಗಳಿಗೆ 12 ಕೋಟಿ ಬಾಡಿಗೆ ನೀಡಬೇಕಾಗುತ್ತಿತ್ತು. ಆದರೆ ಈಗೆ ಮರು ಬಳಕೆಯ ಮಂಚ ಹಾಸಿಗೆ ದಿಂಬು ಹೊದಿಕೆ ಸೇರಿದಂತೆ 7 ಸಾಮಾಗ್ರಿಗಳನ್ನ 2 ಕೋಟಿ 40 ಲಕ್ಷಕ್ಕೆ ಖರೀದಿ ಮಾಡಲಾಗುವುದು, ಉಳಿದ ಸಾಮಾಗ್ರಿಗಳಿಗೆ ತಿಂಗಳಿಗೆ 3 ಕೋಟಿ 25 ಲಕ್ಷ ಬಾಡಿಗೆ ನೀಡಲಾಗುವುದು ಎಂದು ತಿಳಿಸಿದರು.ಇನ್ನು ಒಬ್ಬ ವ್ಯಕ್ತಿಯ ಒಂದು ದಿನದ ಊಟಕ್ಕೆ 240 ರೂಪಾಯಿ ಖರ್ಚಾಗಲಿದ್ದು, ಇಸ್ಕಾನ್​​, ಇಂದಿರಾ ಕ್ಯಾಂಟೀನ್ ಸೇರಿದಂತೆ ಇತರೆ ಎಜೆನ್ಸಿ‌ಗಳಿಗೆ ವಹಿಸಲಾಗುವುದು. ಪ್ರತಿ 100 ರೋಗಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್, ಒಬ್ಬ ಸಹಾಯಕ, ಒಬ್ಬ ಸ್ವಚ್ಛತಾ ಸಿಬ್ಬಂದಿ ಮತ್ತು ಇಬ್ಬರು ಮಾರ್ಷಲ್ ಗಳು ಸೇರಿದಂತೆ ಒಟ್ಟು 2,200 ಸಿಬ್ಬಂದಿ ನಿಯೋಜಿಸಲಾಗುತ್ತದೆ ಎಂದರು.

 

error: Content is protected !!

Join the Group

Join WhatsApp Group