ಕಡಬದ ಎಸ್ಐ ರುಕ್ಮನಾಯ್ಕ್ ಕೊರೋನಾ ವರದಿ ನೆಗೆಟಿವ್ ➤ ಬೆಳ್ಳಂಬೆಳಗ್ಗೆ ಫೀಲ್ಡ್ ಗೆ ಇಳಿದು ಬಿಸಿ ಮುಟ್ಟಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜು.19. ಕಳೆದರಡು ದಿನಗಳ ಹಿಂದೆ ಕಡಬದ ಸಬ್ ಇನ್ಸ್‌ಪೆಕ್ಟರ್ ರ ವಾಹನದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಡಬ ಎಸ್.ಐ ಸೇರಿದಂತೆ ಸಿಬ್ಬಂದಿಗಳ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಪರೀಕ್ಷಾ ವರದಿ ಬಂದಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ರುಕ್ಮ ನಾಯ್ಕ್ ಕರ್ತವ್ಯಕ್ಕೆ ಹಾಜರಾಗಿದ್ದು, ಸಂಡೇ ಸಂಪೂರ್ಣ ಲಾಕ್ ಡೌನ್ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಕಡಬ ಎಸ್.ಐ ರುಕ್ಮ ನಾಯ್ಕ್ ಕ್ವಾರಂಟೈನ್ ನಲ್ಲಿದ್ದ ಕಾರಣ ಶನಿವಾರದಂದು ಕಡಬದಲ್ಲಿ ಹನ್ನೊಂದು ಗಂಟೆ ಕಳೆದರೂ ಜನ ಸಂಚಾರ ಮಾತ್ರ ನಿಂತಿರಲಿಲ್ಲ. ಇಂದು ಬೆಳ್ಳಂಬೆಳಗ್ಗೆ ಫೀಲ್ಡ್ ಗೆ ಇಳಿದಿರುವ ಕಡಬ ಪೊಲೀಸರು ಕಾನೂನು ಮೀರುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಇನ್ನೊಂದೆಡೆ ಸ್ಯಾನಿಟೈಸೇಶನ್ ಮಾಡುವ ಉದ್ದೇಶದಿಂದ 48 ಗಂಟೆಗಳ ಕಾಲ ಮುಚ್ಚಲಾಗಿದ್ದ ಕಡಬ ಸಮುದಾಯ ಆರೋಗ್ಯ ಕೇಂದ್ರವು ಭಾನುವಾರ ಸಂಜೆ ಸಾರ್ವಜನಿಕ ಸೇವೆಗೆ ತೆರೆದುಕೊಳ್ಳಲಿದೆ. ಪ್ರಸ್ತುತ ರೋಗಿಗಳಿಗೆ ಅಗತ್ಯ ಚಿಕಿತ್ಸೆಗಾಗಿ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್ ತಿಳಿಸಿದ್ದಾರೆ.

Also Read  ಮಂಗಳೂರು: ಆಂಬ್ಯುಲೆನ್ಸ್ ಗೆ ಸೈಡ್ ಕೊಡದೇ ಹುಚ್ಚಾಟ ➤ ಸುಮಾರು 30 ಕಿ.ಮೀ. ವರೆಗೂ ಸತಾಯಿಸಿದ ಯುವಕರು...!

error: Content is protected !!
Scroll to Top