(ನ್ಯೂಸ್ ಕಡಬ)newskadaba.com ಕಡಬ, ಜು.15, ದಿನದಿಂದ ದಿನಕ್ಕೆ ತನ್ನ ಶೌರ್ಯವನ್ನು ತೋರುತ್ತಿರುವ ಕೊರೋನಾ ಇದೀಗ ತಾಲೂಕಿನ ಕುದ್ಮಾರು ಗ್ರಾಮದ ಯುವಕನೋರ್ವನಲ್ಲಿ ದೃಢಪಟ್ಟಿದೆ.
ಮಂಗಳೂರಿನ ಪಾಸ್ಟ್ ಫುಡ್ ತಯಾರಿಕಾ ಸಂಸ್ಥಯೊಂದರಲ್ಲಿ ಕರ್ತವ್ಯದಲ್ಲಿದ್ದ ಈತ ಅನಾರೋಗ್ಯ ನಿಮಿತ್ತ ಊರಿಗೆ ಬಂದಿದ್ದು, ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇವರ ಗಂಟಲ ದ್ರವ ಸಂಗ್ರಹಿಸಿ ಕೊರೋನಾ ಪರೀಕ್ಷೆಗೆ ಕಳುಹಿಸಿದ್ದು, ಇದೀಗ ವರದಿಯು ಪಾಸಿಟಿವ್ ಬಂದಿದೆ. ಯುವಕನನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಈತನ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.