ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಭಾರತದ ಚಿಂಗಾರಿ ಆ್ಯಪ್ ಗೆ ಭಾರಿ ಬೇಡಿಕೆ ➤ ಗಂಟೆಗೆ 1 ಲಕ್ಷ ಡೌನ್ ಲೋಡ್

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.01: ಭಾರತದಲ್ಲಿ ಟಿಕ್ ಟಾಕ್ ನಿಷೇಧಗೊಂಡ ಬೆನ್ನಲ್ಲೇ, ಅದೇ ಮಾದರಿಯ ಭಾರತೀಯ ಆಪ್ ಗಳಿಗೆ ಬೇಡಿಕೆ ಹೆಚ್ಚಿದೆ. ಈ ಪೈಕಿ ಅತ್ಯಂತ ಲಾಭ ಪಡೆದಿರುವುದು ಬೆಂಗಳೂರು ಮೂಲದ ಯುವಕರು ಪ್ರಾರಂಭಿಸಿರುವ ಚಿಂಗಾರಿ ಆಪ್. ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಚಿಂಗಾರಿ ಆಪ್ ಡೌನ್ ಲೋಡ್ ಗೆ ಜನರು ಮುಗಿಬಿದ್ದಿದ್ದು ಪ್ರತಿ ಗಂಟೆಗೆ 1 ಲಕ್ಷ ಡೌನ್ ಲೋಡ್ ಹಾಗೂ 2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.

ಟಿಕ್ ಟಾಕ್ ನಿಷೇಧಕ್ಕೂ ಮುನ್ನವೇ ಚಿಂಗಾರಿ ಆಪ್ ನ್ನು 3 ಮಿಲಿಯನ್ ಬಾರಿ ಡೌನ್ ಲೋಡ್ ಆಗಿತ್ತು. ಬೆಂಗಳೂರು ಮೂಲದ ಯುವಕರಾದ ಸಿದ್ಧಾರ್ಥ್ ಗೌತಮ್ ಹಾಗೂ ಬಿಸ್ವಾತ್ಮ ನಾಯಕ್ ಎಂಬುವವರು ಟಿಕ್ ಟಾಕ್ ಗೆ ಪರ್ಯಾಯವಾಗಿ ಚಿಂಗಾರಿ ಆಪ್ ನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದರು. ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮುಂಚೂಣಿಯಲ್ಲಿದ್ದು ಇದೇ ಮಾದರಿಯ ಮಿತ್ರೋ ಆಪ್ ನ್ನೂ ಹಿಂದಿಕ್ಕಿದೆ. ಟಿಕ್ ಟಾಕ್ ಗೆ ಪರ್ಯಾಯವಾದ ಭಾರತದ್ದೇ ಆದ ಆಪ್ ಇದೆ ಎಂಬ ಪ್ರಚಾರ ದೊರೆತ ಬೆನ್ನಲ್ಲೇ ನಮ್ಮ ನಿರೀಕ್ಷೆಗೂ ಮೀರಿದ ಟ್ರಾಫಿಕ್ ಬಂದಿದೆ, ಚಿಂಗಾರಿ ಆಪ್ ಗೆ ಹೂಡಿಕೆಯೂ ಹರಿದುಬರುತ್ತಿದ್ದು, ಮಹತ್ವದ ಮಾತುಕತೆಗಳು ನಡೆಯುತ್ತಿದೆ ಎನ್ನುತ್ತಾರೆ ಸ್ಥಾಪಕರಲ್ಲಿ ಒಬ್ಬರಾದ ನಾಯಕ್.

Also Read  ಹಾವು ಕಚ್ಚಿ ವ್ಯಕ್ತಿ ಮೃತ್ಯು..!

ಉದ್ಯಮಿ ಆನಂದ್ ಮಹೀಂದ್ರಾ ಸಹ ಚಿಂಗಾರಿ ಆಪ್ ಬಗ್ಗೆ ಟ್ವೀಟ್ ಮಾಡಿ ಟಿಕ್ ಟಾಕ್ ನ ಯಾರು ಡೌನ್ ಲೋಡ್ ಮಾಡಿಲ್ಲವೋ ಚಿಂಗಾರಿಯನ್ನು ಡೌನ್ ಲೋಡ್ ಮಾಡಿದ್ದಾರೆ, ಒoಡಿe ಠಿoತಿeಡಿ ಣo ಥಿou ಎಂದು ಟ್ವೀಟ್ ಮಾಡಿದ್ದರು. ಚಿಂಗಾರಿ ಆಪ್ ನ ಮೂಲಕ ಬಳಕೆದಾರರು ವಿಡಿಯೋ ಗಳನ್ನು ಅಪ್ ಲೋಡ್ ಡೌನ್ ಲೋಡ್ ಮಾಡಬಹುದಾಗಿದ್ದು, ಹೊಸ ಜನರೊಂದಿಗೆ ಸಂವಾದ ನಡೆಸಬಹುದಾಗಿದೆ. ವಾಟ್ಸ್ ಆಪ್ ಮಾದರಿಯಲ್ಲೇ ಸ್ಟೇಟಸ್, ವಿಡಿಯೋ, ಆಡಿಯೋ ಕ್ಲಿಪ್, ಉIಈ ಸ್ಟಿಕರ್ ಗಳನ್ನು ಫೋಟೋಗಳನ್ನು ಹಂಚಿಕೊಳ್ಳಬಹುದಾಗಿದೆ. ಇಂಗ್ಲೀಷ್, ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಲಭ್ಯವಿದ್ದು, ಕಂಟೆಂಟ್ ಗೆ ಹೆಚ್ಚು ವ್ಯೂಸ್ ದೊರೆತಷ್ಟೂ ಗ್ರಾಹಕರಿಗೆ ಹಣ ನೀಡುವುದು ಈ ಆಪ್ ನ ವಿಶೇಷತೆಯಾಗಿದೆ.

Also Read  ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ ►ಮದುವೆ ಮನೆಯಿಂದ ವಾಪಸ್ಸಾಗುತ್ತಿದ್ದ ವೇಳೆ ಘಟನೆ

➤ ಸಂಗ್ರಹ

error: Content is protected !!
Scroll to Top