(ನ್ಯೂಸ್ ಕಡಬ) newskadaba.com.ನಿಟ್ಟೆ,ಜೂ.19:ಕೊರೊನಾದಿಂದಾಗಿ ಹಲವು ಸಮಸ್ಯೆಗಳು ದಿನೇ ದಿನೇ ಬೆಳಕಿಗೆ ಬರುತ್ತಿದ್ದರೆ. ಈ ಸಮಸ್ಯೆಗಳನ್ನು ಪರಿಹಾರ ಮಾಡಲು ಹಲವು ಸಂಘ ಸಂಸ್ಥೆಗಳು ಶ್ರಮಿಸುತ್ತಿದೆ, ಜೊತೆಗೆ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ ಇದೀಗ ಇಂತದ್ದೆ ಹೊಸ ಸಂಶೋಧನೆಯೊಂದಿಗೆ ಸುದ್ದಿಯಾಗುತ್ತಿದೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ.
ಕೊರೊನಾ ತಡೆಗೆ ಅಗತ್ಯವಿರುವ ಸಾಮಾಜಿಕ ಅಂತರವನ್ನು ಕಾಪಾಡುವುದರೊಂದಿಗೆ ದೇವಾಲಯಗಳಲ್ಲಿ ತೀರ್ಥ ಪ್ರಸಾದ ವಿತರಣೆಗೆ ಅನುಕೂಲವಾಗುವ ರೀತಿಯಲ್ಲಿ ಸಂವೇದಕಾಧಾರಿತ ತೀರ್ಥ ನೀಡುವ ಯಂತ್ರವನ್ನು ಆವಿಷ್ಕರಿಸಿದ್ದಾರೆ ನಿಟ್ಟೆ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಸಂತೋಷ್ ಇವರು.
ಈ ಯಂತ್ರದ ತೀರ್ಥಸ್ವೀಕರಿಸುವ ಭಾಗದಲ್ಲಿ ನೀವು ಕೈಹಿಡಿದರೆ ಸಾಕು. ನಿಮ್ಮ ಕೈಗೆ ನಿಗದಿತ ಪ್ರಮಾಣದ ತೀರ್ಥ ಸುರಿಯುತ್ತದೆ.
ಈ ಯಂತ್ರವು ವಿದ್ಯುತ್ ಶಕ್ತಿಯ ಸಹಾಯದೊಂದಿಗೆ ಸ್ವಯಂಚಾಲಿತವಾಗಿದ್ದು ಸುಲಭವಾಗಿ ಅನುಸ್ಥಾಪನೆಗೊಳಿಸಬಹುದಾಗಿದೆ. ಈ ಯಂತ್ರವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೊಣ್ಕರ್ ಸಂಸ್ಥೆಯ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಐ ಆರ್ ಮಿತ್ತಂತಾಯ. ರೆಜಿಸ್ಟಾರ್ ಪ್ರೊ.ಯೋಗೀಶ್ ಹೆಗ್ಡೆ. ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಪೈ ಮತ್ತು ಗ್ರಂಥಪಾಲಕ ಡಾ.ದಿವಾಕರ ಭಟ್ ಉಪಸ್ಥಿತರಿದ್ದರು.