ಕೊರೊನಾ ಏರಿಕೆ ಹಿನ್ನಲೆ ➤ ಸದ್ಯಕಿಲ್ಲ ಶಬರಿಮಲೆ ಅಯ್ಯಪ್ಪನ ದರ್ಶನ

(ನ್ಯೂಸ್ ಕಡಬ) newskadaba.com ತಿರುವನಂತಪುರ,ಜೂ.12: ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತರು ಇನ್ನೂ ಸ್ವಲ್ಪದಿನ ಕಾಯಬೇಕಾದ ಪರಿಸ್ಥಿತಿ ಬಂದಿದ್ದು, ಕೇರಳ ಸರಕಾರ ಶಬರಿಮಲೆಗೆ ಭಕ್ತರಿಗೆ ಪ್ರವೇಶಕ್ಕೆ ಸದ್ಯಕ್ಕೆ ಅನುಮತಿ ನಿರಾಕರಿಸಿದೆ.

 

ಕೇಂದ್ರ ಸರಕಾರದ ಅನ್ ಲಾಕ್ 1.0ದಲ್ಲಿ ಧಾರ್ಮಿಕ ಕೇಂದ್ರಗಳನ್ನು ಮಾರ್ಗಸೂಚಿ ಗಳೊಂದಿಗೆ ತೆರೆಯಲು ಅನುಮತಿ ನೀಡಿದ ಬೆನ್ನಲ್ಲೆ ದೇಶದಾದ್ಯಂತ ಹಲವು ದೇವಸ್ಥಾನಗಳು ಭಕ್ತರಿಗೆ ದೇವರ ದರ್ಶನಕ್ಕ ಅವಕಾಶ ನೀಡಿವೆ. ಈ ಹಿನ್ನಲೆ ಕೇರಳ ಸರಕಾರವೂ ಕೂಡ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಿತ್ತು. ಆದರೆ ದೇಶದಾದ್ಯಂತ ಕೊರೊನಾ ಸೊಂಕಿನ ಪ್ರಕರಣಗಳು ಏರಿಕೆ ಹಿನ್ನಲೆ ಶಬರಿಮಲೆಗೆ ಭಕ್ತರ ಪ್ರವೇಶಕ್ಕೆ ಮುಖ್ಯ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡದೇ ಇರಲು ಕೇರಳ ಸರ್ಕಾರ ನಿರ್ಧರಿಸಿದೆ.

Also Read  ಚಾಲಕನ ಅತಿವೇಗದ ಪರಿಣಾಮ ಸುಳ್ಯದಲ್ಲಿ ಸರಣಿ ಅಪಘಾತ

 

error: Content is protected !!
Scroll to Top