ಅರಂತೋಡು: ಎಸ್ಕೆಎಸ್ಸೆಸ್ಸೆಫ್ ಶಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ



(ನ್ಯೂಸ್ ಕಡಬ)newskadaba.com ಸುಳ್ಯ. ಜೂ. 7, ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ನಿರ್ದೇಶನ ಪ್ರಕಾರ ಅರಂತೋಡು ಎಸ್ಕೆಎಸ್ಸೆಸ್ಸೆಫ್ ಶಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಯಿತು.







ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿ.ಜೆ.ಎಮ್. ಕಾರ್ಯದರ್ಶಿ ಕೆ.ಎಮ್. ಮೂಸಾನ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಮಜೀದ್, ಕಾರ್ಯದರ್ಶಿ ಫಸೀಲು, ಅರಂತೋಡು ಸ್ವಲಾತ್ ಸಮಿತಿ ಕಾರ್ಯದರ್ಶಿ ಶಂಸುದ್ದೀನ್ ಕೆ.ಯು, ಮೊೖದು ಕುಂಞ ಕುಕ್ಕುಂಬಳ, ಅರಂತೋಡು ಶಾಖೆ ಅಧ್ಯಕ್ಷ ತಾಜುದ್ದೀನ್ ಅರಂತೋಡು, ಕಾರ್ಯದರ್ಶಿ ಜುಬೈರ್, ಸುಳ್ಯ ಟ್ರೆಂಡ್ ಕಾರ್ಯದರ್ಶಿ ಖಾದರ್ ಮೊಟ್ಟೆಂಗಾರ್, ಆಶಿಕ್ ಕುಕ್ಕುಂಬಳ, ನೌಫಲ್ ಕುನ್ನಿಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಾಖೆಯ ಕಾರ್ಯದರ್ಶಿ ಜುಬೈರ್ ಸ್ವಾಗತಿಸಿ ವಂದಿಸಿದರು.






error: Content is protected !!
Scroll to Top