ಕರ್ನಾಟಕದ ಹಂಪಿ ಮತ್ತು ಜಾರ್ಖಂಡ್‌ನಲ್ಲಿ ಭೂಕಂಪ

(ನ್ಯೂಸ್ ಕಡಬ) newskadaba.com ,ಜೂ 05: ಕರ್ನಾಟಕದ ಹಂಪಿ ಮತ್ತು ಜಾರ್ಖಂಡ್‌ನಲ್ಲಿ ಭೂಕಂಪವಾಗಿದ್ದು,  ಬೆಳಿಗ್ಗೆ 6:55 ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 4.7 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ.

 

 

 

ಇಂದು ಬೆಳ್ಳಂಬೆಳಗ್ಗೆ ಕರ್ನಾಟಕದ ಹಂಪಿ ಮತ್ತು ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ಭೂಕಂಪ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ. ಇಂದು ಬೆಳಿಗ್ಗೆ 6:55 ರ ಸುಮಾರಿಗೆ ಕರ್ನಾಟಕದ ಹಂಪಿ ಯಲ್ಲಿ 4.0 ತೀವ್ರತೆಯ ಭೂಕಂಪನ ಉಂಟಾಗಿದ್ದು ಇದೇ ವೇಳೆ ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ರಿಕ್ಟರ್ ಮಾಪಕದಲ್ಲಿ 4.7 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ಒದಗಿಸಿದೆ.ಭೂಕಂಪದ ಅನುಭವವಾಗುತ್ತಿದ್ದಂತೆ ಜನರು ತಮ್ಮ ಮನೆಗಳಿಂದ ಹೊರಬಂದಿರುವ ಈ ವೇಳೆ ಘಟನೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

Also Read  ಟ್ಯಾಂಕ್ ಗೆ ಬಿದ್ದು ಬಾಲಕಿ ಮೃತ್ಯು

.

 

 

error: Content is protected !!
Scroll to Top