ಕುಕ್ಕೆಯತ್ತ ಭಕ್ತರ ಆಗಮನ ➤ ಹೊರಗಿಂದಲೇ ಕೈ ಮುಗಿಯುತ್ತಿರುವ ಭಕ್ತರು

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ,ಮೇ.30: ಕೊರೋನಾ ಮಾಹಮಾರಿ ಗೆ ತತ್ತರಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆದ್ರೇ ಈಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ದೂರದ ಊರುಗಳಿಂದ ಭಕ್ರರು ಆಗಮಿಸಲು ಆರಂಭಿಸಿದ್ದಾರೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಸಾರ್ವಜನಿಕರಿಗೆ ಮುಚ್ಚಿದ್ದ ದೇವಸ್ಥಾನ ಇನ್ನೂ ತೆರೆದಿಲ್ಲವಾದರೂ ಭಕ್ತರು ಮಾತ್ರ ಬರಲಾರಂಭಿಸಿದ್ದಾರೆ.

 

ಇನ್ನು, ಜೂನ್ 1 ರ ಬಳಿಕ ದೇವಸ್ಥಾನಗಳು ಮತ್ತೇ ಭಕ್ತರಿಗೆ ತೆರೆದುಕೊಳ್ಳಲಿದ್ದರೂ ಕಳೆದ ಒಂದು ವಾರದಿಂದ ಭಕ್ತರು ಬರುತ್ತಿದ್ದು ಹೊರಗಿಂದಲೇ ಕೈ ಮುಗಿದು ತೆರೆಳುತ್ತಿರುವುದು ಕಂಡು ಬಂದಿದೆ. ಪ್ರತಿದದಿನ 50ಕ್ಕೂ ಅಧಿಕ ಕುಟುಂಬಗಳು ಬಂದು ಹೊರಗಿನಿಂದ ಕೈ ಮುಗಿದು ತೆರಳುತ್ತಿದ್ದಾರೆ ಎಂದು ದೇವಸ್ಥಾನದ ನೌಕಕರು ತಿಳಿಸಿದ್ದಾರೆ.

Also Read  ಮತದಾರರಿಗೆ ಹಂಚಲು ಗಿಫ್ಟ್…!   ➤ ಸಿಕ್ಕಿತು ರಾಶಿ ರಾಶಿ ವಸ್ತು, ಹಣ

 

error: Content is protected !!
Scroll to Top