(ನ್ಯೂಸ್ ಕಡಬ) newskadaba.com ಸುಳ್ಯ ,ಮೇ27:ಈಗಾಗಲೇ ಪಂಚಾಯತ್ ನಲ್ಲಿ ಸದಸ್ಯರುಗಳ ಆಡಳಿತ ಅವಧಿ ಕೊನೆಗೊಂಡಿದ್ದು, ಹೀಗಿರುವಾಗ ಸರ್ಕಾರ ಇದೀಗ ಪಂಚಾಯತ್ ಗಳಿಗೆ ನಾಮ ನಿರ್ದೇಶನ ಸದಸ್ಯರುಗಳನ್ನು ನೇಮಿಸಲು ಮುಂದಾಗಿದೆ. ಇದರ ಬದಲಿಗೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಗೆ ಚುನಾವಣೆ ನಡೆಸಬೇಕೆಂದು ಸರಕಾರಕ್ಕೆ ಒತ್ತಾಯಿಸುತ್ತೇವೆ. ಒಂದೋ ಸರ್ಕಾರ ಚುನಾವಣೆ ನಡೆಸಬೇಕು, ತಪ್ಪಿದ್ದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಇಲ್ಲದಿದ್ದಲ್ಲಿ ಆಯಾಯ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆಯನ್ನು ಕಾಂಗ್ರೇಸ್ ಪಕ್ಷದ ವತಿಯಿಂದ ನಡೆಸಲಾಗುವುದೆಂದು ಸುಳ್ಯ ಬ್ಲಾಕ್ ಕಾಂಗ್ರೇಸ್ ಉಪಾದ್ಯಕ್ಷರಾದ ಸುಧೀರ್ ರೈ ಮೇನಾಲ ಎಚ್ಚರಿಸಿದ್ದಾರೆ.
ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸರಕಾರದ ನೀತಿಯು ಕಾನೂನಿಗೆ ವಿರುದ್ದವಾಗಿದ್ದು, ಎಲ್ಲೆಡೆ ವಿರೋಧಗಳು ಕೇಳಿ ಬರುತ್ತಿದೆ. ಇದರಿಂದಾಗಿ, ಪಂಚಾಯತ್ ನ ಅವಧಿ ಮುಗಿದ ಕೂಡಲೇ ಚುನಾವಣೆ ನಡೆಸಬೇಕಾದದ್ದು ಸರಕಾರದ ಹಾಗೂ ಚುನಾವಣೆ ಆಯೋಗದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.