ಇಂದೇ ನಿಮಗಿಷ್ಟದ ಬೈಕ್ ಖರೀದಿಸಿ, 2021ರಲ್ಲಿ ಹಣ ಪಾವತಿಸಿ…!! ➤ ಕಡಬದ ಅಡಿಗ ಟಿವಿಎಸ್ ನಿಂದ ಕೊರೋನಾ ಹಿನ್ನೆಲೆಯಲ್ಲಿ ವಿನೂತನ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಮೇ.26. ಪ್ರಸ್ತುತ ದಿನದಲ್ಲಿ ದ್ವಿಚಕ್ರ ವಾಹನವು ಪ್ರತಿಯೊಂದು ಕುಟುಂಬದ ಅಗತ್ಯತೆಯಾಗಿದ್ದು, ಇದನ್ನು ಮನಗಂಡ ಭಾರತದ ಹೆಮ್ಮೆಯ ಸ್ವದೇಶೀ ದ್ವಿಚಕ್ರ ತಯಾರಕ ಕಂಪನಿಯಾದ ಟಿವಿಎಸ್, ಪ್ರಸ್ತುತ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಗ್ರಾಹಕರ ಹಣಕಾಸು ವ್ಯವಸ್ಥೆಯನ್ನು ಸರಾಗಗೊಳಿಸಲು ಇಎಂಐ ರಜಾ ಯೋಜನೆಯನ್ನು ಮೊದಲ ಬಾರಿಗೆ ಟಿವಿಎಸ್ ಕ್ರೆಡಿಟ್ ಸಹಯೋಗದೊಂದಿಗೆ ಅಡಿಗ ಮೋಟಾರ್ಸ್, ಕಡಬದಲ್ಲಿ ಪರಿಚಯಿಸುತ್ತಿದ್ದಾರೆ.

“ಈಗ ಖರೀದಿಸಿ ಮತ್ತು ಮುಂದಿನ ವರ್ಷ ಇಎಂಐ ಪಾವತಿಸಲು ಪ್ರಾರಂಭಿಸಿ” ಈ ಯೋಜನೆಯ ಅಡಿಯಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಟಿವಿಎಸ್ ದ್ವಿಚಕ್ರ ವಾಹನವನ್ನು ಕೇವಲ ಡೌನ್ ಪೇಮೆಂಟ್ ಮಾತ್ರ ಪಾವತಿಸಿ ಖರೀದಿಸಬಹುದಾಗಿದ್ದು, ತಿಂಗಳ ಕಂತುಗಳನ್ನು ಮುಂದಿನ ವರ್ಷದಿಂದ ಪ್ರಾರಂಭಿಸಬಹುದಾಗಿದೆ. ಸರಳ ದಾಖಲೆಯೊಂದಿಗೆ ಷೋರೂಮ್ ನಲ್ಲೇ ಸುಲಭವಾಗಿ ಸಾಲ ಸೌಕರ್ಯವಿದ್ದು, ತ್ವರಿತ ಸಾಲ ಮಂಜೂರಾತಿ ಹಾಗೂ ಅದೇ ದಿನ ಹೊಸ ವಾಹನವನ್ನು ನಿಮ್ಮದಾಗಿಸಬಹುದಾಗಿದೆ.

Also Read  ಉಡುಪಿ : 1 ವರ್ಷದ ಮಗು ಸಹಿತ 14 ಕರೊನಾ ಸೋಂಕು ದೃಢ

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯೆಂತೆ ಮಾರಾಟ ಮತ್ತು ಸೇವೆ ಪ್ರಕ್ರಿಯೆಯನ್ನು ಪುನಾರಂಭಿಸಿರುವ ಅಡಿಗ ಮೋಟಾರ್ಸ್ ಗ್ರಾಹಕರಿಗೆ ಮತ್ತು ತಮ್ಮ ವಾಹನಗಳಿಗೆ ಫ್ರೀ ಸ್ಯಾನಿಟೈಸ್ ಸರ್ವೀಸ್ ಘೋಷಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಆನ್‌ಲೈನ್ ವ್ಯವಹಾರಗಳ ಮೂಲಕ ಮಾರಾಟ ಹಾಗೂ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ.

ಈ ವಿಶೇಷ ಯೋಜನೆಯು ಸೀಮಿತ ಅವಧಿಗಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಟಿವಿಎಸ್ ಕಂಪನಿಯ ಅಧಿಕೃತ ಡೀಲರ್ ಆಗಿರುವ ಅಡಿಗ ಮೋಟಾರ್ಸ್, ಕಡಬ ಷೋರೂಮ್ ಗೆ (ಕರೆಮಾಡಿ 7618766636/35) ಇಂದೇ ಭೇಟಿ ನೀಡಬಹುದೆಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಕರ್ನಾಟಕದ 'ಎ' ವರ್ಗದ ದೇವಸ್ಥಾನಗಳಿಂದ ವರ್ಷಕ್ಕೆ 420 ಕೋಟಿ ರೂ. ಆದಾಯ ! 

error: Content is protected !!
Scroll to Top