ಮಂಗಳೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್ ➤ ಕರಾವಳಿಯಲ್ಲಿ ನಿಲ್ಲದ ಕೊರೋನಾ ಆತಂಕ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.06. ಮಂಗಳೂರಿನಲ್ಲಿ ಕೊರೋನಾ ಆತಂಕ ಮತ್ತೆ ಮುಂದುವರಿದಿದ್ದು, ಇಂದು ಮೂರು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.

ಇಬ್ಬರು ಬಾಲಕಿಯರು ಮತ್ತು ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಬಂಟ್ವಾಳ ಕಸಬಾದ P-390 ಮೃತ ಮಹಿಳೆಯ 16 ವರ್ಷದ ಪುತ್ರಿಗೆ ಸೋಂಕು ಧೃಡಪಟ್ಟಿದೆ. ಮಂಗಳೂರಿನ ಬೋಳೂರಿನ P-536 ಸಂಪರ್ಕದಿಂದ 11 ವರ್ಷದ ಬಾಲಕಿ ಮತ್ತು 35 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಇನ್ನು ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಮಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿರುವುದು ಇದೀಗ ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಹಾಗಾಗಿ ಜಿಲ್ಲಾಡಳಿತವು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದನ್ನು ನೋಡಬೇಕಾಗಿದೆ.

Also Read  ಬೆಳಿಗ್ಗೆ ಆಪರೇಷನ್ ಸಕ್ಸಸ್..!! ರಾತ್ರಿ ನಿಗೂಢ ಸಾವು..?? ➤ ಮಂಗಳೂರು ನಗರವನ್ನು ಸುತ್ತಾಡಿದ ಕಾಡುಕೋಣದ ಕಥೆಯಿದು..!!

error: Content is protected !!
Scroll to Top