ಮಂಗಳೂರು, ಎ.30: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಬಂಟ್ವಾಳ ವೃದ್ಧೆ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ವೈರಸ್ ಮೂರನೇ ಬಲಿ ಪಡೆದಿದೆ.
ಬಂಟ್ವಾಳದ ಕೊರೋನಾ ಪೀಡಿತ ವೃದ್ದೆ ಚಿಕಿತ್ಸೆ ಫಲಿಸದೇ ಗುರುವಾರ ಸಂಜೆ ಮೃತಪಟ್ಟಿದ್ದಾರೆ.
ಬಂಟ್ವಾಳ ಕಸಬಾದ 69 ವರ್ಷದ ಮೃದ್ಧೆ ಎ.21ರಂದು ಕೊರೋನ ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಎ.19ರಂದು ಬಂಟ್ವಾಳ ಪೇಟೆಯ ಸಾವನ್ನಪ್ಪಿದ್ದ ಮಹಿಳೆಯಿಂದ ಸೋಂಕು ತಗುಲಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯನ್ನು ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.