ರಾಜ್ಯದಲ್ಲಿ ರವಿವಾರ 11 ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 226 ಕ್ಕೆ ಏರಿಕೆ

ಬೆಂಗಳೂರು, ಎ.12: ರಾಜ್ಯದಲ್ಲಿ ಕೋವಿಡ್ -19 ಸೋಂಕು ಪಾಸಿಟಿವ್ ಸಂಖ್ಯೆ ದಿನೇ ದಿನೇ ಏರುತ್ತಿದೆ. ಇಂದು ಹೊಸದಾಗಿ 11 ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 226ಕ್ಕೇರಿದೆ.

ಬೆಳಗಾವಿಯ ರಾಯಬಾಗದಲ್ಲಿ ಇಂದು ಹೊಸ ನಾಲ್ಕು ಪ್ರಕರಣಗಳು ದೃಢವಾಗಿದೆ. ಉಳಿದಂತೆ ಕಲಬುರಗಿಯಲ್ಲಿ ಎರಡು ಪ್ರಕರಣ, ಬೆಂಗಳೂರು ನಗರದಲ್ಲಿ ಮೂರು, ಮೈಸೂರಿನಲ್ಲಿ ಒಂದು, ವಿಜಯಪುರದಲ್ಲಿ ಒಂದು ಪ್ರಕರಣ ದೃಢವಾಗಿದೆ.

Scroll to Top