ಯಾವುದೇ ಕಾರಣಕ್ಕೂ ಬರೀ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಬೇಡಿ ► ಯಾವ್ಯಾವ ಆಹಾರ ತಿಂದರೆ ಏನೇನಾಗುತ್ತದೆ ಎಂದು ತಿಳಯಬೇಕೇ…?

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಆ.28. ನಾವು ತಿನ್ನುವ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸುವುದಿಲ್ಲ. ಆದರೆ ಕೆಲವೊಂದು ಆಹಾರಗಳನ್ನು ತಿಂದರೆ ವಿವಿಧ ರೋಗಗಳು ಸೇರಿದಂತೆ ಆಯಾಸಗಳು ನಮ್ಮನ್ನು ಸುತ್ತಿಕೊಳ್ಳುತ್ತದೆ‌. ತುಂಬಾನೇ ಹಾಸಿದು ಬರೀ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ತಿಂದರೆ ಆ್ಯಸಿಡಿಟಿ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಇಂಥ ಕೆಲ ಪ್ರಮುಖ ಆಹಾರಗಳ ಪಟ್ಟಿಯನ್ನು ನೀಡಲಾಗಿದೆ. ‘ನ್ಯೂಸ್ ಕಡಬ’ದ ಓದುಗರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

1) ಬಾಳೆಹಣ್ಣು:
ಸೂಪರ್ ಫುಡ್ ಎನ್ನಲಾಗುವ ಇದು ಜೀರ್ಣಕ್ರಿಯೆಗೆ ಸಹಕಾರಿ. ಬಾಳೆಹಣ್ಣಿನಲ್ಲಿ ಮ್ಯಾಗ್ನೀಶಿಯಮ್ ಮತ್ತು ಪೊಟ್ಯಾಶಿಯಮ್ ಅಂಶ ಹೇರಳವಾಗಿರುತ್ತದೆ. ಖಾಲಿ ಹೊಟ್ಟೆಗೆ ಸೇರಿದಾಗ ರಕ್ತದಲ್ಲಿರುವ ಇವುಗಳ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತದೆ.

2) ಮೊಸರು:
ಇವುಗಳನ್ನು ತಿಂದರೆ ಹೈಡ್ರೋಕ್ಲೋರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಇದು ಆ ಯೋಗರ್ಟ್’ನಲ್ಲಿ ಲ್ಯಾಕ್ಟಿಕ್ ಆ್ಯಸಿಡ್ ಉತ್ಪಾದಿಸುವ ಬ್ಯಾಕ್ಟೀರಿಯಾವನ್ನು ಕೊಂದು ಆ ಮೂಲಕ ಅಸಿಡಿಟಿಗೆ ಕಾರಣವಾಗುತ್ತದೆ.

Also Read  ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು‌.!➤ಪ್ರಕರಣ ದಾಖಲು

3) ಟೊಮ್ಯಾಟೋ:
ಇವುಗಳಲ್ಲಿ ವಿಟಮಿನ್ ಸಿ ಮತ್ತು ನ್ಯೂಟ್ರಿಯೆಂಟ್ಸ್ ಅಂಶ ಬಹಳಷ್ಟಿರುತ್ತವೆ. ಆದರೆ, ಇದರಲ್ಲಿರುವ ಟ್ಯಾನಿಕ್ ಆ್ಯಸಿಡ್’ನಿಂದ ದೇಹದೊಳಗೆ ಅಸಿಡಿಟಿ ಉಂಟಾಗುತ್ತದೆ. ಹೀಗಾಗಿ, ಟೊಮೆಟೋವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸದಿರುವುದು ಉತ್ತಮ.

4) ಕಿತ್ತಳೆ, ಮೂಸಂಬಿ, ನಿಂಬೆ:
ಇವುಗಳಲ್ಲಿರುವ ಫ್ರೂಟ್ ಆ್ಯಸಿಡ್’ಗಳು ಎದೆಯುರಿ ಮತ್ತು ಗ್ಯಾಸ್ಟ್ರಿಕ್ ತೊಂದರೆಗೆ ಕಾರಣವಾಗಬಹುದು.

5) ಪಿಯರ್ಸ್ (ಪೇರಳೆ ಹಣ್ಣು):
ಇವುಗಳಲ್ಲಿ ಬಹಳ ಒರಟಾದ ಫೈಬರ್ ಅಂಶವಿರುತ್ತದೆ. ಖಾಲಿ ಹೊಟ್ಟೆಯಲ್ಲಿ ತಿಂದಾಗ ಈ ಫೈಬರ್’ಗಳು ದೇಹದೊಳಗಿನ ಸೂಕ್ಷ್ಮ ಮ್ಯೂಕಸ್ ಮೆಂಬ್ರೇನ್’ಗಳಿಗೆ ಹಾನಿ ಮಾಡಬಹುದು.

6) ಹಸಿರು ತರಕಾರಿ:
ಸೌತೆಕಾಯಿಯಂತಹ ಹಸಿ ಹಸಿರು ತರಕಾರಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದಾಗ ಹೊಟ್ಟೆನೋವು, ಎದೆಯುರಿ ಕಾಣಿಸಬಹುದು.

7) ಟೀ, ಕಾಫಿ:
ಬೆಳಗ್ಗೆ ಎದ್ದೊಡನೆ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಸಾಕಷ್ಟು ಮಂದಿಗೆ ಇರುತ್ತದೆ. ಆದರೆ, ಕೆಫೀನ್ ಅಂಶವಿರುವ ಈ ಪೇಯಗಳನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅಸಿಡಿಟಿಗೆ ಕಾರಣವಾಗಬಹುದು. ದಿನಪೂರ್ತಿ ಎದೆಯುರಿ, ಅಜೀರ್ಣತೆ ಬಾಧಿಸಬಹುದು. ಪಚನಕ್ರಿಯೆಗೆ ಕಾರಣವಾಗುವ ಗ್ಯಾಸ್ಟ್ರಿಕ್ ಜ್ಯೂಸ್’ಗಳ ಸ್ರವಿಕೆಗೆ ಕೆಫೀನ್’ಗಳು ತಡೆಯೊಡ್ಡುತ್ತವೆ.

Also Read  'ಬೆಳಕಿನ ಹಬ್ಬ ದೀಪಾವಳಿ ವೇಳೆ ಆಹಾರದ ಸಾಂಸ್ಕೃತಿಕ ಮಹತ್ವ' ✍️ ಡಾ.ಅಜಿತ್ ಕೆ ಕೋಡಿಂಬಾಳ

(ಕೃಪೆ: ಟೈಮ್ಸ್ ಆಫ್ ಇಂಡಿಯಾ)

error: Content is protected !!
Scroll to Top