ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣ: ಆರೋಪಿ ಆದಿತ್ಯ ರಾವ್ ಗುರುತುಪತ್ತೆ ಪರೇಡ್‌ಗೆ ಸಿದ್ದತೆ

ಮಂಗಳೂರು, ಫೆ.20: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್‌ನನ್ನು ಗುರುತುಪತ್ತೆ ಪರೇಡ್ ನಡೆಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

ಈಗಾಗಲೇ 45 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಸ್ಪೋಟಕ ಇರಿಸಿದ ಪ್ರಕರಣದ ತನಿಖಾಧಿಕಾರಿಗಳು ಸಂಗ್ರಹ ಮಾಡಿದ್ದಾರೆ. ಈ ಪೈಕಿ 10 ಕ್ಕೂ ಅಧಿಕ ಪ್ರತ್ಯಕ್ಷದರ್ಶಿಗಳ ಎದುರು ಆರೋಪಿ ಆದಿತ್ಯರಾವ್ ಪರೇಡ್ ನಡೆಸಲು ಎಲ್ಲಾ ಸಿದ್ಧತೆ ನಡೆದಿದೆ. ಪರೇಡ್ ನಡೆಸಲು ಮಂಗಳೂರು ತಹಶೀಲ್ದಾರ್‌ಗೆ ಪೊಲೀಸರು ಪತ್ರ ಬರೆದಿದ್ದು ತಹಶೀಲ್ದಾರ್ ಶೀಘ್ರದಲ್ಲೆ ಪ್ರಕ್ರಿಯೆ ಆರಂಭ ಮಾಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.ಪ್ರಸ್ತುತ ಈ ಪ್ರಕರಣದ ಆರೋಪಿ ಆದಿತ್ಯರಾವ್ ಮಂಗಳೂರು ಕಾರಾಗೃಹದಲ್ಲಿದ್ದಾನೆ.

Also Read  ವಿಕೃತ ಮನಸ್ಸಿನ ಪುಸ್ತಕ ಮಾರಾಟಗಾರ ➤ 10ರ ಬಾಲೆ ಮೇಲೆ ಬಿತ್ತು ಆತನ ಕಣ್ಣು ..!

error: Content is protected !!
Scroll to Top