ತಂದೆಯಿಂದಲೇ ಕಾಲುವೆಗೆ ಎಸೆಯಲ್ಪಟ್ಟಿದ್ದ ಮಗಳು ಶವವಾಗಿ ಪತ್ತೆ

(ನ್ಯೂಸ್ ಕಡಬ) newskadaba.com ಬಳ್ಳಾರಿ. ಫೆ.19, ಹೆತ್ತ ತಂದೆಯಿಂದಲೇ ಕಾಲುವೆಗೆ ಎಸೆಯಲ್ಪಟ್ಟಿದ್ದ ಮಗಳು ಶವವಾಗಿ ಪತ್ತೆಯಾದ ಘಟನೆ ಆಂಧ್ರ ಪ್ರದೇಶದ ಉಂತಕಲ್ಲು ಎಂಬಲ್ಲಿ ನಡೆದಿದೆ.

ನಗರದ ಬಂಡಿಹಟ್ಟಿ ನಿವಾಸಿಯಾದ ಸುರೇಶ್ ಮತ್ತು ಮಗಳು ಪಲ್ಲವಿ (22) ಇವರ ನಡುವೆ ಎರಡು ದಿನಗಳ ಹಿಂದೆ ಮನೆಯಲ್ಲಿ ಜಗಳವಾಗಿದ್ದು, ತಂದೆ ಸುರೇಶ್ ಕುಡಿಯಲು ಹಣ ನೀಡುವಂತೆ ಮಗಳನ್ನು ಪೀಡಿಸುತ್ತಿದ್ದನು. ಈ ವೇಳೆ ನನ್ನನ್ನು ಸಾಯಿಸಿಬಿಡಿ ಎಂದಿದ್ದ ಮಗಳನ್ನು ಕರೆದೊಯ್ದು ಕೈಕಾಲು ಕಟ್ಟಿ ಸಮೀಪದ ಎಚ್.ಎಲ್.ಸಿ ಕಾಲುವೆಗೆ ಎಸೆದಿದ್ದನು. ಸೋಮವಾರ ಇಡೀ ದಿನ ಪಲ್ಲವಿಯ ಶೋಧ ಕಾರ್ಯ ನಡೆದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ನೆರೆಯ ಆಂಧ್ರದ ಉಂತ್ತಕಲ್ಲು ಗ್ರಾಮದ ಬಳಿ ಕಾಲುವೆಯಲ್ಲಿ ಪತ್ತೆಯಾಗಿದೆ. ಮೂರು ವರ್ಷದ ಹಿಂದೆ ಪಲ್ಲವಿ ತಾಯಿ ಶಾರದಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲೇ ಕರ್ನಾಟಕದ ಭಕ್ತ ಆತ್ಮಹತ್ಯೆ

error: Content is protected !!
Scroll to Top