ಬೈರಿಕಟ್ಟೆ: ಕಾರುಗಳ ನಡುವೆ ಢಿಕ್ಕಿ; ನಾಲ್ವರಿಗೆ ಗಾಯ



ವಿಟ್ಲ, ಜ.20: ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಬೈರಿಕಟ್ಟೆ ಅಶ್ವಥ ನಾರಾಯಣ ಮಂದಿರದ ಸಮೀಪ ನಡೆದಿದೆ.





ಗಾಯಗೊಂಡವರನ್ನು ಕಮಲಾ, ಮಲ್ಲಿಕಾ ಹಾಗೂ ಝೈಲೋ ಕಾರಿನಲ್ಲಿದ್ದ ಇಸ್ಮಾಯಿಲ್‌ ಶಾಫಿ, ಐಸಮ್ಮ ಎಂದು ಗುರುತಿಸಲಾಗಿದೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.






ಕನ್ಯಾನ ಕಡೆಯಿಂದ ಬೈರಿಕಟ್ಟೆ ಮೂಲಕ ಅಳಿಕೆ ಕಡೆಗೆ ಸಾಗುತ್ತಿದ್ದ ಝೈಲೋ ಕಾರು ನಿಯಂತ್ರಣ ತಪ್ಪಿ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯಾದ ರಭಸಕ್ಕೆ ಎರಡು ಕಾರುಗಳು ಜಖಂಗೊಂಡಿವೆ. ಆಲ್ಟೋ ಕಾರಿನಲ್ಲಿದ್ದ ನಾಲ್ವರು ಸಂಬಂಧಿಕರ ಮನೆಗೆ ಹೋಗಿದ್ದು ಹಿಂದಿರುಗಿ ಬರುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

 

error: Content is protected !!
Scroll to Top