ವಿದೇಶದಿಂದ ಕೋಮು ಪ್ರಚೋದನೆಯ ಸಂದೇಶ ರವಾನೆ ➤ ಊರಿಗೆ ತಲುಪಿದ ವಿಟ್ಲ ನಿವಾಸಿಯ ಬಂಧನ

(ನ್ಯೂಸ್ ಕಡಬ) newskadaba.com ವಿಟ್ಲ, ಜ.07. ಕೋಮು ಸೌಹಾರ್ದಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಡಿದ ಆರೋಪದಲ್ಲಿ ಓರ್ವನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎನ್.ಆರ್.ಸಿ ಮತ್ತು ಸಿ.ಎ.ಎ ಕಾಯ್ದೆಗೆ ಸಂಬಂಧಿಸಿದಂತೆ ಮಂಗಳೂರು ವಾಮಂಜೂರಿನ ಹಿಂದೂ ಸಂಘಟನೆಗೆ ಸೇರಿದ ಕೆಲವು ವ್ಯಕ್ತಿಗಳಿಗೆ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ವಾಮಂಜೂರು ಮೂಲದ ವ್ಯಕ್ತಿಯೋರ್ವರಿಗೆ ಬಂಟ್ವಾಳ ಪೆರಿವಾಯಿ ಗ್ರಾಮದ ಅನ್ವರ್ ಮತ್ತು ನಿಯಾಜ್ ಎಂಬವರು ವಿದೇಶದಿಂದ ಪೋನ್ ಕರೆ ಮಾಡಿ ಒತ್ತಡ ಹೇರಿದ್ದಲ್ಲದೆ, ಈ ಸಂಬಂಧ ಆರೋಪಿಗಳು ಕಳುಹಿಸಿರುವ ವಾಟ್ಸಾಪ್ ಸಂದೇಶದಲ್ಲಿ ಹಿಂದೂ ಸಂಘಟನೆಯೊಂದರ ಸದಸ್ಯರುಗಳನ್ನು ಹಾಗೂ ಕೆಲವು ರಾಜಕೀಯ ನಾಯಕರುಗಳನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಪೆರಿವಾಯಿ ನಿವಾಸಿ ಯತೀಶ್ ಎಂಬವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ: 153(ಎ), 504, 505(2), 507, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪೈಕಿ ಊರಿಗೆ ಬಂದಿದ್ದ ಅನ್ವರ್ ಎಂಬಾತನನ್ನು ಸೋಮವಾರದಂದು ವಶಕ್ಕೆ ಪಡೆಯಲಾಗಿದೆ.

Also Read  4 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

error: Content is protected !!
Scroll to Top