|
ಬಂಟ್ವಾಳ, ಡಿ.22: ಬೈಕ್ ಹಾಗೂ ಟಿಪ್ಪರ್ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಾಯಗೊಂಡ ಘಟನೆ ಕರೋಪಾಡಿ ಗ್ರಾಮದ ಕೇರಳ- ಕರ್ನಾಟಕ ಗಡಿಭಾಗದ ಪಾದೆಕಲ್ಲುವಿನಲ್ಲಿ ರವಿವಾರ ನಡೆದಿದೆ.
ಮೃತಪಟ್ಟವರನ್ನು ಮುಗುಳಿ ನಿವಾಸಿ ಅನ್ವರ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಸಹ ಸವಾರನನ್ನು ನವಾಫ್ ಎಂಬವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕೇರಳಕ್ಕೆ ಮರಳು ಸಾಗಾಟ ಮಾಡುವ ಲಾರಿ ಪಾದೆಕಲ್ಲು ತಿರುವಿನಲ್ಲಿ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಉರುಳಿ ಬಿದ್ದಿದ್ದು, ಲಾರಿಯ ಚಕ್ರ ಅನ್ವರ್ ಹೊಟ್ಟೆ ಮೇಲೆ ಚಲಿಸಿ ಆತನ ಶರೀರ ಛಿದ್ರಗೊಂಡಿದೆ. ಘಟನೆ ನಡೆದ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು ಮರಳು ಲಾರಿಗಳ ಸಂಚಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿದ್ದು, ಪ್ರತಿಭಟನೆ ನಡೆಸಿದ ಜನರನ್ನು ಚದುರಿಸಿ, ಘಟನೆಯ ಬಗ್ಗೆ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ |
Related Posts:
- ಬೆಂಗಳೂರಿನಲ್ಲಿ ಏರ್ ಇಂಡಿಯಾದಿಂದ ವಿಮಾನ ನಿರ್ವಹಣೆ ತರಬೇತಿ ಸಂಸ್ಥೆ ಸ್ಥಾಪನೆ!
- ಬಂಟ್ವಾಳದಲ್ಲಿ ನ. 24, 25 ರಂದು ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ
- 'ವಕ್ಫ್ ವಿಚಾರ, ಜನರು ದಂಗೆ ಏಳುವ ಪರಿಸ್ಥಿತಿ'- ಆರ್.ಅಶೋಕ್
- 'ಅದಾನಿಯನ್ನು ಕೂಡಲೇ ಕೇಂದ್ರ ಸರ್ಕಾರ ಬಂಧನ ಮಾಡಬೇಕು'- ಖರ್ಗೆ ಆಗ್ರಹ
- ಮಂಗಳೂರು: ಬಾಲಕಿಯ ಮೇಲೆ ಅತ್ಯಾಚಾರ; ಗರ್ಭಪಾತ ಮಾಡಿಸಿದ್ದ ವ್ಯಕ್ತಿಗೆ 20ವರ್ಷ ಶಿಕ್ಷೆ, ದಂಡ
- ಬೆಳ್ತಂಗಡಿ: ಹೊಸ ಬಗೆಯ ಪ್ಯಾಂಟ್ ಧರಿಸಿದ್ದಕ್ಕೆ ಪಡ್ಡೆ ಹುಡುಗರಿಂದ ಅವಮಾನ: ಯುವಕ ಆತ್ಮಹತ್ಯೆಗೆ ಯತ್ನ
- ಅಪರಾಧ ಹಿನ್ನೆಲೆಯಿರುವ ಅದಾನಿಯವರನ್ನು ಮೋದಿಯವರು ರಕ್ಷಿಸುವುದ್ಯಾಕೆ?: ಸಚಿವ ದಿನೇಶ್ ಗುಂಡೂರಾವ್
- ಮಂಗಳೂರು: ಯು.ಟಿ ಖಾದರ್ ನಿಂದ ಕಲಾಪರ್ಬ ದ ಲಾಂಛನ, ಕರಪತ್ರ ಬಿಡುಗಡೆ
- ವಿಷಹಾರ ಸೇವಿಸಿ 35ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
- ಪಾನ್ ಕಾರ್ಡ್ ಆಧರಿಸಿ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆಕ್ಷೇಪ
- ಮಂಗಳೂರು: ಟ್ರಾಯ್ನಿಂದ ಕರೆ ಮಾಡಿರುವುದಾಗಿ ನಂಬಿಸಿ 1.71 ಕೋಟಿ ರೂ.ವಂಚನೆ
- 'ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ'- ಸಿ.ಎಂ
- ಮಕ್ಕಳನ್ನು ಬೈಕಿನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆ ದಾಳಿ
- ವಕ್ಫ್ ಬೋರ್ಡ್ ಮೂಲಕ ರೈತರಿಗೆ ನೋಟಿಸ್ ನೀಡುವ ವಿರುದ್ಧ ರಾಜ್ಯಾದ್ಯಂತ ಹೋರಾಟ
- ಶಿಕ್ಷಕರ ಕೊರತೆ ನೀಗಿಸುವಂತೆ ಒತ್ತಾಯಿಸಿ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ
- ಮತ್ತೆ ಬಂಗಾರದ ಬೆಲೆಯಲ್ಲಿ ಏರಿಕೆ